ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳಂನ ಹಿರಿಯ ಗಾಯಕ ಎಂ.ಎಸ್ ನಸೀಂ ನಿಧನ

Last Updated 10 ಫೆಬ್ರುವರಿ 2021, 8:24 IST
ಅಕ್ಷರ ಗಾತ್ರ

ತಿರುವನಂತಪುರ: ಮಲಯಾಳಂನ ಹಿರಿಯ ಗಾಯಕ ಎಂ.ಎಸ್ ನಸೀಂ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಕೊನೆ ಉಸಿರೆಳೆದರು.

ನಸೀಂ ಅವರು 16 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಪಾರ್ಶ್ವವಾಯುಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.

ನಸೀಂ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌,‘ ನಸೀಂ ಅವರು ಗಾನಮೇಳದ ಮೂಲಕ ಪ್ರಸಿದ್ಧಿ ಪಡೆದರು. ಜನರ ಮನಸ್ಸಿಗೆ ಹತ್ತಿರವಾದರು’ ಎಂದು ಹೇಳಿದರು.

ದೂರದರ್ಶನ, ಆಕಾಶವಾಣಿ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಮೊಹಮ್ಮದ್‌ ರಫಿ ಮತ್ತು ಬಾಬುರಾಜು ಅವರ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಎರಡು ಸಿನಿಮಾಗಳಲೂ ಅವರು ಹಾಡಿದ್ದಾರೆ.

1992,1993,1995 ಮತ್ತು 1997ರಲ್ಲಿ ನಸೀಂ ಅವರಿಗೆ ಅತ್ಯುತ್ತಮ ಕಿರುತೆರೆ ಗಾಯಕ ಪ್ರಶಸ್ತಿ ಮತ್ತು ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT