ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ನಟ ಯಶ್ ದಾಸ್‌ಗುಪ್ತ ಸಹಿತ ಹಲವು ನಟರು ಬಿಜೆಪಿಗೆ ಸೇರ್ಪಡೆ

Last Updated 17 ಫೆಬ್ರುವರಿ 2021, 14:48 IST
ಅಕ್ಷರ ಗಾತ್ರ

ಕೋಲ್ಕತ್ತ: ಬಂಗಾಳಿ ನಟ ಯಶ್ ದಾಸ್‌ಗುಪ್ತ ಅವರು ಇತರ ಕೆಲವು ನಟರೊಂದಿಗೆ ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯ ಹಾಗೂ ಉಪಾಧ್ಯಕ್ಷ ಮುಕುಲ್ ರಾಯ್ ಸಮ್ಮುಖದಲ್ಲಿ ದಾಸ್‌ಗುಪ್ತ ಹಾಗೂ ಇತರ ನಟರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.

ಬಿಜೆಪಿ ಯಾವಾಗಲೂ ಯುವಕರಿಗೆ ಅವಕಾಶ ನೀಡಿದೆ. ಉತ್ತಮ ಬದಲಾವಣೆಗಾಗಿ ನಾವೆಲ್ಲ ಜತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಪಕ್ಷ ಸೇರ್ಪಡೆ ಬಳಿಕ ದಾಸ್‌ಗುಪ್ತ ಹೇಳಿದ್ದಾರೆ.

ದಾಸ್‌ಗುಪ್ತ ಅವರನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಅವರ ಆಪ್ತರೆಂದೇ ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT