ಬುಧವಾರ, ಜೂನ್ 16, 2021
22 °C

Covid-19: ವಿದೇಶಿ ನೆರವಿನ ಬಗ್ಗೆ ಪಾರದರ್ಶಕತೆ ಏಕಿಲ್ಲ? - ರಾಹುಲ್ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಪಡೆದ ವಿದೇಶಿ ನೆರವಿನಲ್ಲಿ ಪಾರದರ್ಶಕತೆ ಏಕಿಲ್ಲ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದಿಂದ ಉತ್ತರವನ್ನು ಬಯಸಿದ್ದಾರೆ.

ಕೋವಿಡ್‌ ವಿದೇಶಿ ನೆರವಿಗೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. 'ಭಾರತ ಯಾವೆಲ್ಲ ಸರಬರಾಜುಗಳನ್ನು ಗಿಟ್ಟಿಸಿಕೊಂಡಿದೆ? ಅದು ಎಲ್ಲಿದೆ? ಅದರಿಂದ ಯಾರು ಪ್ರಯೋಜನ ಪಡೆಯುತ್ತಿದ್ದಾರೆ? ಅವುಗಳನ್ನು ರಾಜ್ಯಗಳಿಗೆ ಹೇಗೆ ಹಂಚಲಾಗುತ್ತಿದೆ? ಪಾರದರ್ಶಕತೆ ಏಕಿಲ್ಲ? ಭಾರತ ಸರ್ಕಾರವೇ, ನಿಮ್ಮ ಬಳಿ ಉತ್ತರವಿದೆಯೇ' ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

 

 

 

ವಿದೇಶದಿಂದ ಗಿಟ್ಟಿಸಿದ ಕೋವಿಡ್ ನೆರವಿನ ಬಗ್ಗೆ ಕಾಂಗ್ರೆಸ್ ಪಾರದರ್ಶಕತೆಯನ್ನು ಬಯಸುತ್ತಿದೆ. ಅದನ್ನು ಎಲ್ಲಿಂದ ಮತ್ತು ಹೇಗೆ ಬಳಸಲಾಗಿದೆ ಎಂಬುದರ ಕುರಿತು ದೇಶದ ಜನತೆಗೆ ವಿವರವನ್ನು ನೀಡುವಂತೆ ಸರ್ಕಾರವನ್ನು ಬಯಸಿದೆ.

ಇದನ್ನೂ ಓದಿ: 

 

ಮಗದೊಂದು ಟ್ವೀಟ್‌ನಲ್ಲಿ ಕೋವಿಡ್ ಬಿಕ್ಕಟ್ಟನ್ನು ನಿಯಂತ್ರಿಸುವಲ್ಲಿ ಮತ್ತು ಜನರಿಗೆ ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವೈಫಲ್ಯವನ್ನು ಕಂಡಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

 

 

 

'ಲಸಿಕೆ ಇಲ್ಲ, ಉದ್ಯೋಗವೂ ಇಲ್ಲ. ಜನರು ಕೊರೊನಾ ವೈರಸ್ ತೀವ್ರತೆಯನ್ನು ಎದುರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸಂಪೂರ್ಣ ವೈಫಲ್ಯವನ್ನು ಅನುಭವಿಸಿದೆ' ಎಂದು ಆರೋಪಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು