ಶನಿವಾರ, ಫೆಬ್ರವರಿ 4, 2023
18 °C

ನಾಮಪತ್ರ ಸಲ್ಲಿಸಿದರೆ ಶಾಸಕರನ್ನು ದೆಹಲಿಗೆ ಬರಮಾಡಿಕೊಳ್ಳುತ್ತೇನೆ: ಗೆಹಲೋತ್‌

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ: ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ನಿರ್ಧರಿಸಿದರೆ ಶಾಸಕರನ್ನು ದೆಹಲಿಗೆ ಬರಮಾಡಿಕೊಳ್ಳುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಹೇಳಿದ್ದಾರೆ.

ಆದರೆ ಅದಕ್ಕೂ ಮೊದಲು 'ಭಾರತ್‌ ಜೋಡೋ ಯಾತ್ರೆ' ಸಾಗುತ್ತಿರುವ ಕೊಚ್ಚಿಗೆ ಭೇಟಿ ನೀಡುವುದಾಗಿ, ಅಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆಯುವುದಾಗಿ ಹೇಳಿದ್ದಾರೆ. ಇದನ್ನು ಗೆಹಲೋತ್‌ ಅವರ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ತಿಳಿಸಿದ್ದಾಗಿ ಸಂಪುಟ ಸಚಿವರು ತಿಳಿಸಿದ್ದಾರೆ.

ನೂತನ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರಿಗೆ ಗೆಹಲೋತ್‌ ಅವರು ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು. ನಂತರ ಶಾಸಕಾಂಗ ಸಭೆ ನಡೆಸಿದರು.

ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಪ್ರತಾಪ್‌ ಸಿಂಗ್‌ ಅವರು, 'ಸಿಎಂ ಅಶೋಕ್‌ ಗೆಹಲೋತ್‌ ಅವರು ಪಕ್ಷದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದರೆ ಶಾಸಕರಿಗೆ ದೆಹಲಿಗೆ ಬರುವಂತೆ ಸಂದೇಶ ಸಿಗಲಿದೆ' ಎಂದಿದ್ದಾರೆ.

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಸೆಪ್ಟೆಂಬರ್‌ 24ರಿಂದ 30ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ನಾಮ ನಿರ್ದೇಶನ ವಾಪಸ್ ಪಡೆಯಲು ಅಕ್ಟೋಬರ್‌ 8 ಕೊನೆಯ ದಿನವಾಗಿದೆ. ಅಕ್ಟೋಬರ್‌ 17ರಂದು ಚುನಾವಣೆ ನಡೆಯಲಿದ್ದು, ಅ. 19ಕ್ಕೆ ಫಲಿತಾಂಶ ಹೊರಬೀಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು