ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಉಚಿತ ಆರೋಗ್ಯ ಸೇವೆ: ಕೇಜ್ರಿವಾಲ್‌ ಅಭಯ

Last Updated 30 ಸೆಪ್ಟೆಂಬರ್ 2021, 8:26 IST
ಅಕ್ಷರ ಗಾತ್ರ

ಲೂಧಿಯಾನ (ಪಿಟಿಐ): ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದರೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಮತ್ತು ಅತ್ಯುತ್ತಮ ಚಿಕಿತ್ಸೆ ಸೇವೆಯನ್ನು ಒದಗಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿಯೂ ಆಗಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ ಹೇಳಿದ್ದಾರೆ.

ಎರಡು ದಿನದ ಭೇಟಿಗೆ ಪಂಜಾಬ್‌ಗೆ ಭೇಟಿ ನೀಡಿರುವ ಅವರು ಸುದ್ದಿಗೋಷ್ಠಿಯಲ್ಲಿ, ಆರೋಗ್ಯ ಸೇವೆ ಕುರಿತು ಆರು ನಿಶ್ಚಿತ ಭರವಸೆ ನಾನು ಆಗಮಿಸಿದ್ದೇನೆ. ಅಧಿಕಾರಕ್ಕೆ ಬಂದರೆ ಇದನ್ನು ಜಾರಿಗೊಳಿಸುತ್ತೇವೆ ಎಂದರು.

ಪಂಜಾಬ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳ ಸ್ತಿತಿ ದುಸ್ತರವಾಗಿದೆ. ಜನರು ಅನಿವಾರ್ಯವಾಗಿ ಖಾಸಗಿ ಅಸ್ಪತ್ರೆಗಳಿಗೆ ಹೋಗಬೇಕಿದೆ. ಅಲ್ಲಿ, ಹೆಚ್ಚಿನ ಶೋಷಣೆಯೂ ಇದೆ ಎಮದು ಕೇಜ್ರಿವಾಲ್‌ ಹೇಳಿದರು.

ನಾವು ದೆಹಲಿಯಲ್ಲಿ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಬದಲಿಸಿದ್ದೇವೆ. ಪಂಜಾಬ್‌ನ ಪ್ರತಿಯೊಬ್ಬರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ, ಗುಣಮಟ್ಟದ ಚಿಕಿತ್ಸೆ ಲಭ್ಯವಾಗಿದೆ. ಎಲ್ಲ ಔಷಧಗಳು, ಪರೀಕ್ಷೆ, ಶಸ್ತ್ರಚಿಕಿತ್ಸೆಗಳು ಉಚಿತವಾಗಿ ಇರಲಿವೆ. ₹ 10–15 ಲಕ್ಷ ವೆಚ್ಚವಾಗುವ ಶಸ್ತ್ರಚಿಕಿತ್ಸೆಯೂ ಉಚಿತವಾಗಿರಲಿದೆ ಎಂದರು.

ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್‌ ಮಾದರಿಯಲ್ಲಿಯೇ ಇಲ್ಲಿ ಪಿಂಡ್‌ ಕ್ಲಿನಿಕ್‌ ತೆರೆಯಲಾಗುವುದು. ಇಂತಹ ಸುಮಾರು 16,000 ಸೌಲಭ್ಯಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT