ಬುಧವಾರ, ಜನವರಿ 20, 2021
29 °C

ಉಚಿತ ಲಸಿಕೆ ನೀಡಲು ಪಿಎಂ ಕೇರ್ಸ್‌ ನಿಧಿ ಬಳಕೆಯಾಗುವುದೇ?: ರಾಹುಲ್‌ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ಲಸಿಕೆ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, 'ಪ್ರಧಾನಿ ರಾಷ್ಟ್ರಕ್ಕೆ ಹೇಳಲೇಬೇಕು. 1. ಈಗಿರುವ ಎಲ್ಲ ಲಸಿಕೆಗಳ ಪೈಕಿ ಸರ್ಕಾರವು ಯಾವ ಲಸಿಕೆಯನ್ನು ವಿತರಣೆ ಮಾಡಲು ಆಯ್ಕೆ ಮಾಡಿಕೊಳ್ಳುತ್ತದೆ ಮತ್ತು ಯಾಕೆ? 2. ಯಾರಿಗೆ ಮೊದಲು ಲಸಿಕೆ ದೊರೆಯುತ್ತದೆ ಮತ್ತು ಲಸಿಕೆ ವಿತರಣೆಗೆ ಇರುವ ಯೋಜನೆಗಳೇನು? 3. ಉಚಿತ ಲಸಿಕೆ ಕಾರ್ಯಕ್ರಮಕ್ಕಾಗಿ ಪಿಎಂ ಕೇರ್ಸ್‌ ನಿಧಿಯು ವಿನಿಯೋಗವಾಗುವುದೇ? 4. ಎಲ್ಲ ಭಾರತೀಯರಿಗೂ ಯಾವಾಗ ಲಸಿಕೆ ಹಾಕಲಾಗುತ್ತದೆ?,' ಎಂದು ರಾಹುಲ್‌ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಕೋವಿಡ್ ಲಸಿಕೆ ವಿತರಣಾ ಕಾರ್ಯತಂತ್ರದ ಬಗ್ಗೆ ಮೋದಿ ಇತ್ತೀಚೆಗೆ ಪ್ರಮುಖರ ಚರ್ಚೆ ನಡೆಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು