ಶುಕ್ರವಾರ, ಡಿಸೆಂಬರ್ 4, 2020
25 °C
’ಮಹಾಘಟಬಂಧನ್’ ತೇಜಸ್ವಿ ಯಾದವ್‌ಗೆ ಬಿಹಾರ ಸಿಂಎ ನಿತೀಶ್ ಕುಮಾರ್ ಪ್ರಶ್ನೆ

ಉದ್ಯೋಗದ ಭರವಸೆ ಈಡೇರಿಸಲು ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುತ್ತಾರೆಯೇ: ನಿತೀಶ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟನಾ: ‘ರಾಜ್ಯದಲ್ಲಿ ಹತ್ತು ಲಕ್ಷ ಸರ್ಕಾರಿ ಉದ್ಯೋಗಗಳ ಸೃಷ್ಟಿಗೆ ವಾರ್ಷಿಕವಾಗಿ ₹1.44 ಲಕ್ಷ ಕೋಟಿ ವೆಚ್ಚವಾಗಲಿದ್ದು, ಆರ್‌ಜೆಡಿ ಮುಖಂಡ ತೇಜಸ್ವಿಯಾದವ್ ಇಷ್ಟು ಹಣವನ್ನು ಎಲ್ಲಿಂದ ತರುತ್ತಾರೆ. ಈ ಭರವಸೆ ಈಡೇರಿಸಲು ರಾಜ್ಯದಲ್ಲಿ ಬೇರೆ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸುತ್ತಾರೋ ಅಥವಾ ವೇತನ ನೀಡುವುದನ್ನೂ ವಿಳಂಬ ಮಾಡುತ್ತಾರೋ’ ಎಂದು ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.

’ಮಹಾಘಟಬಂಧನ್‌’ಗೆ ಮತ ಚಲಾಯಿಸಿ ಗೆಲ್ಲಿಸಿದರೆ, ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಮಂಜೂರು ಮಾಡುವುದಾಗಿ ತೇಜಸ್ವಿ ಯಾದವ್ ನೀಡಿದ ಭರವಸೆ ಕುರಿತು ನಿತೀಶ್ ಕುಮಾರ್ ಈ ರೀತಿ ಪ್ರಶ್ನಿಸಿದ್ದಾರೆ.

ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆಗಾಗಿ ನಡೆದ 'ನಿಶ್ಚಯ್‌ ಸಂವಾದ್' ಎಂಬ ವರ್ಚುವಲ್ ರ‍್ಯಾಲಿ ಮೂಲಕ ಮಾತನಾಡಿದ ನಿತೀಶ್ ಕುಮಾರ್, ’ತಮ್ಮ ಸರ್ಕಾರವು ರಾಜ್ಯದ ಕೈಗಾರಿಕಾ ನೀತಿಯನ್ನು ಬದಲಾಯಿಸಿದ್ದು, ಇದರಿಂದ ಹಲವಾರು ಕೈಗಾರಿಕೆಗಳನ್ನು ಸ್ಥಾಪನೆಗೆ ಆಹ್ವಾನಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.

’ತೇಜಸ್ವಿ ಅವರಿಗೆ ಅಷ್ಟು ಪ್ರಮಾಣದಲ್ಲಿ ಸರ್ಕಾರಿ ಉದ್ಯೋಗ ಸೃಷ್ಟಿ ಅಸಾಧ್ಯ. ಹಾಗೆಯೇ ಅವರಿಗೆ ಆಡಳಿತ ನಡೆಸಲು ಅವಕಾಶವೂ ಸಿಗುವುದಿಲ್ಲ’ ಎಂದು ನಿತೀಶ್ ಕುಮಾರ್ ಹೇಳಿದರು. ’ಆದರೆ ಅವರು ಹೇಳಿದಂತೆ ಉದ್ಯೋಗ ಸೃಷ್ಟಿಸುವುದಾದರೆ, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ ₹1.44 ಲಕ್ಷ ಕೋಟಿ ವೆಚ್ಚವಾಗುತ್ತದೆ. ಇದರಿಂದ ಇತರೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಬಿಡುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.

’ಈ ಮೊದಲು ಸರ್ಕಾರಿ ಅಧಿಕಾರಿಗಳು ಯಾರೂ ಸಮಯಕ್ಕೆ ಸರಿಯಾಗಿ ಸಂಬಳ ಪಡೆಯುತ್ತಿರಲಿಲ್ಲ. ’2005ರಲ್ಲಿ ತಮಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿರಲಿಲ್ಲ ಎಂದು ಶಿಕ್ಷಕರು ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ’ವಿಕಾಸ ಯಾತ್ರೆ’ ಸಂದರ್ಭದಲ್ಲಿ ತಮಗೆ ತಿಳಿಸಿದ್ದಾಗಿ’ ನಿತೀಶ್ ಕುಮಾರ್ ನೆನಪಿಸಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು