ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫುಟ್ನಿಕ್ ವಿ ಲಸಿಕೆ ಉತ್ಪಾದನೆ; ಆರ್‌ಡಿಐಎಫ್‌ ಜೊತೆ ವೊಕ್ಹಾರ್ಟ್‌ ಒಪ್ಪಂದ

Last Updated 13 ಆಗಸ್ಟ್ 2021, 11:53 IST
ಅಕ್ಷರ ಗಾತ್ರ

ಮುಂಬೈ: ಭಾರತದಲ್ಲಿ ಸ್ಫುಟ್ನಿಕ್‌ ವಿ ಮತ್ತು ಸ್ಫುಟ್ನಿಕ್‌ ಲೈಟ್‌ ಲಸಿಕೆಗಳನ್ನು ಉತ್ಪಾದಿಸಿ, ಪೂರೈಸುವ ಕುರಿತು ವೊಕ್ಹಾರ್ಟ್‌ ಲಿಮಿಟೆಡ್ ಸಂಸ್ಥೆಯು ರಷ್ಯಾದ ರಷಿಯನ್ ಡೈರೆಕ್ಟ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ (ಆರ್‌ಡಿಐಎಫ್‌) ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ.

ಕೋವಿಡ್–19 ವಿರುದ್ಧದ ಈ ಲಸಿಕೆಗಳನ್ನು ದೇಶಿಯವಾಗಿ ಉತ್ಪಾದಿಸಿ, ಪೂರೈಸಲು ಆರ್‌ಡಿಐಎಫ್‌ನ ಸಹಯೋಗಿ ಸಂಸ್ಥೆ ಎನ್‌ಸೊ ಹೆಲ್ತ್‌ ಕೇರ್ ಜೊತೆಗೆ ಒಡಂಬಡಿಕೆ ಏರ್ಪಟ್ಟಿದೆ ಎಂದು ಹೇಳಿಕೆ ತಿಳಿಸಿದೆ. ಒಪ್ಪಂದದ ಅವಧಿಯು ಜೂನ್‌ 2023ರವರೆಗೂ ಇರಲಿದೆ.

ಹೇಳಿಕೆಯ ಅನುಸಾರ, ಸ್ಫುಟ್ನಿಕ್‌ ವಿ ಲಸಿಕೆಯು 69 ದೇಶಗಳಲ್ಲಿ ನೋಂದಣಿಯಾಗಿದೆ. ಈ ಲಸಿಕೆಯು ಕೊರೊನಾ ರೂಪಾಂತರ ತಳಿ ಡೆಲ್ಟಾ ವಿರುದ್ಧ ಶೇ 83.1 ರಷ್ಟು ಪರಿಣಾಮಕಾರಿ.ಆಸ್ಪತ್ರೆಗೆ ದಾಖಲಾದವರಲ್ಲಿಯೂ ಇದು ಶೇ 94.4ರಷ್ಟು ಪರಿಣಾಮಕಾರಿಯಾಗಿದೆ.

ವೊಕ್ಹಾರ್ಟ್ ಸ್ಥಾಪಕ ಅಧ್ಯಕ್ಷ ಡಾ.ಹಬಿಲ್‌ ಖೋರಕಿವಾಲಾ ಅವರು, ಆರ್‌ಡಿಐಎಫ್‌ ಜೊತೆಗಿನ ಪಾಲುದಾರಿಕೆ ಸಂತಸ ತಂದಿದೆ. ಇದು, ಕೋವಿಡ್ ವಿರುದ್ಧ ಹೋರಾಟದಲ್ಲಿ ನಮ್ಮ ಬದ್ಧತೆಯನ್ನು ಬಿಂಬಿಸಿದೆ‘ ಎಂದು ಹೇಳಿದರು.

ಎನ್‌ಸೊ ಹೆಲ್ತ್‌ ಕೇರ್ ಸಂಸ್ಥೆಯ ವಿನಯ್‌ ಮಾಲೂ ಅವರು, ’ಸ್ಫುಟ್ನಿಕ್‌ ವಿ ಹೆಚ್ಚು ಪರಿಣಾಮಕಾರಿ ಹಾಗೂ ವಿಶ್ವಾಸಾರ್ಹ ಲಸಿಕೆ ಎಂಬುದು ಸಾಬೀತಾಗಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT