ಸೋಮವಾರ, ಜುಲೈ 4, 2022
23 °C

ಘಾಟ್ ರಸ್ತೆ ಅಡ್ಡಗಟ್ಟಿದ ಕಾಡಾನೆಗಳು: ಆಂಬುಲೆನ್ಸ್‌ನಲ್ಲೇ ಮಗುವನ್ನು ಹೆತ್ತ ಮಹಿಳೆ

ಪಿಟಿಐ Updated:

ಅಕ್ಷರ ಗಾತ್ರ : | |

ಈರೋಡ್: ಕಾಡಾನೆಗಳು ರಸ್ತೆ ಅಡ್ಡಗಟ್ಟಿದ್ದರಿಂದ ಮುಂದೆ ತೆರಳಲಾಗದೆ ಮಹಿಳೆ ಆಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ತಮಿಳುನಾಡಿನ ಈರೋಡ್‌ ಜಿಲ್ಲೆಯಲ್ಲಿ ನಡೆದಿದೆ. 24 ವರ್ಷದ ಬುಡಕಟ್ಟು ಜನಾಂಗದ ಮಹಿಳೆ ಗಂಡು ಮಗುವನ್ನು ಹೆತ್ತಿದ್ದಾರೆ.

ಗುರುವಾರ, ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಂಬುಲೆನ್ಸ್ ವ್ಯವಸ್ಥೆ ಮಾಡಿದ ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ, ಆಸ್ಪತ್ರೆಗೆ ತೆರಳುವ ಮಾರ್ಗದ ಘಾಟ್ ರಸ್ತೆಗೆ ಬಂದ ಕಾಡಾನೆಗಳು ಅಲ್ಲಿಯೇ ಬೀಡು ಬಿಟ್ಟಿದ್ದರಿಂದ ಆಂಬುಲೆನ್ಸ್ ಮುಂದೆ ತೆರಳಲು ಸಾಧ್ಯವಾಗಲಿಲ್ಲ. ಸುಮಾರು ಅರ್ಧ ಗಂಟೆ ಕಾಲ ಆನೆಗಳು ರಸ್ತೆಯಲ್ಲೇ ನಿಂತಿದ್ದವು.

ಈ ಮಧ್ಯೆ, ಮಹಿಳೆಯ ಹೆರಿಗೆ ನೋವು ಹೆಚ್ಚಾಗಿತ್ತು. ಆಕೆಗೆ ಆಂಬುಲೆನ್ಸ್ ಸಿಬ್ಬಂದಿ ನೆರವು ನೀಡಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಯಾದ ಕೆಲ ನಿಮಿಷಗಳ ಬಳಿಕ ಆನೆಗಳು ರಸ್ತೆ ಬಿಟ್ಟು ಕಾಡಿಗೆ ತೆರಳಿದ್ದು, ಮಹಿಳೆ ಮತ್ತು ಮಗುವನ್ನು ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಹಿಳೆ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು