ಶನಿವಾರ, ಜನವರಿ 28, 2023
24 °C

ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಭಾರವಾದ ಲೋಹ ಬಿದ್ದು ಮಹಿಳೆ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಠಾಣೆ: ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಭಾರವಾದ ಲೋಹ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಗುರುವಾರ ನಡೆದಿದೆ. 

ನಗರದ ಹೆದ್ದಾರಿ ಪಕ್ಕದ ಮಾಲ್‌ ಬಳಿ ಘಟನೆ ಸಂಭವಿಸಿದೆ. ಚಿಂದಿ ಆಯುವ ಮಹಿಳೆ ಕಾಮಗಾರಿ ನಡೆಯುತ್ತಿದ್ದ ಮೆಟ್ರೊ ಹಳಿಯ ಕೆಳಗಿದ್ದರು. ಆಗ ಭಾರವಾದ ಲೋಹದ ತುಂಡೊಂದು ಮಹಿಳೆ ಮೇಲೆ ಬಿದ್ದಿದೆ ಎಂದು ಥಾಣೆ ನಗರ ಪಾಲಿಕೆಯ ಸ್ಥಳೀಯ ವಿಪತ್ತು ನಿರ್ವಹಣಾ ಘಟಕದ(ಆರ್‌ಎಂಡಿಸಿ) ಮುಖ್ಯಸ್ಥ ಅವಿನಾಶ್‌ ಸಾವಂತ್‌ ಹೇಳಿದ್ದಾರೆ. 

ಮಹಿಳೆ ಬ್ಯಾರಿಕೇಡ್ ಅನ್ನು ದಾಟಿ ಪಿಲ್ಲರ್‌ಗಾಗಿ ಅಗೆದ ಗುಂಡಿ ಪ್ರವೇಶಿಸಿದಾಗ ವಸ್ತು ಅವರ ಮೇಲೆ ಬಿದ್ದಿದೆ ಎಂದು  ರಾಬೋಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‌ಅಗ್ನಿಶಾಮಕ ಸಿಬ್ಬಂದಿ ಮತ್ತು ಆರ್‌ಡಿಎಂಸಿ ತಂಡ ಸ್ಥಳಕ್ಕೆ ಧಾವಿಸಿ ಮಹಿಳೆ ಶವವನ್ನು ಗುಂಡಿಯಿಂದ ಹೊರತೆಗೆದಿದೆ. ಸುನೀತಾ ಕಾಂಬಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಮಹಿಳೆ ಎಂದು ಸಾವಂತ್‌ ತಿಳಿಸಿದರು.

 ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು