ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಬಣಗಳ ಮಧ್ಯೆ ಘರ್ಷಣೆ: ಎಫ್‌ಐಆರ್‌ ದಾಖಲು, ಐವರ ಬಂಧನ

Last Updated 11 ಸೆಪ್ಟೆಂಬರ್ 2022, 13:05 IST
ಅಕ್ಷರ ಗಾತ್ರ

ಮುಂಬೈ: ‘ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ಬಣ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಬಣದ ನಡುವೆ ಭಾನುವಾರ ಬೆಳಗಿನ ಜಾವ ಘರ್ಷಣೆ ಸಂಭವಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಎರಡು ಗುಂಪುಗಳೂ ದೂರು ನೀಡಿದ ಬಳಿಕ ಮುಂಬೈ ಪೊಲೀಸರು ಸ್ಥಳೀಯ ಶಾಸಕ ಸದಾ ಸರವಣಕರ್‌ ಸೇರಿದಂತೆ ಎರಡೂ ಬಣಗಳ, 10ರಿಂದ 20 ಕಾರ್ಯಕರ್ತರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ’ ಎಂದು ಅವರು ಹೇಳಿದರು.

‘ದಾದರ್‌ ಠಾಣೆಯ ಪೊಲೀಸರು ಘರ್ಷಣೆಗೆ ಸಂಬಂಧಿಸಿದಂತೆ ಐದು ಮಂದಿ ಶಿವಸೇನಾ ಕಾರ್ಯಕರ್ತರನ್ನು ಬಂಧಿಸಿದ್ದರು. ನಂತರ ಅವರನ್ನು ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು. ಶನಿವಾರ ರಾತ್ರಿ 12.30 ಸಮಯದಲ್ಲಿ ಶಿವಸೇನಾ ಕಾರ್ಯಾಧ್ಯಕ್ಷ ಸಂತೋಷ್‌ ತಳವಾಣೆ, ಮಹೇಶ್‌ ಸಾವಂತ್‌ ಹಾಗೂ ಇನ್ನು 30 ಮಂದಿಯ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ’ ಎಂದರು.

ಸಂತೋಷ್‌ ಅವರು ಶಿಂದೆ ಬಣದ ಭಾಗವಾಗಿದ್ದರೆ, ಮಹೇಶ್‌ ಸಾವಂತ್‌ ಅವರು ಠಾಕ್ರೆ ಬಣದ ಭಾಗವಾಗಿದ್ದಾರೆ. ಉದ್ಧವ್‌ ಠಾಕ್ರೆಯ ಬೆಂಬಲಿಗರಾಗಿರುವ ಸಂಸದ ಅರವಿಂದ್‌ ಸಾವಂತ್‌ ಅವರು, ಸಾವರ್ಜನಿಕ ಪ್ರದೇಶದಲ್ಲಿ ಗುಂಡು ಹಾರಿಸಿದ್ದಕ್ಕಾಗಿ ಶಿಂದೆ ಬಣದ ಶಾಸಕ ಸದಾ ಸರವಣಕರ್‌ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಉದ್ಧವ್‌ ಠಾಕ್ರೆ ಬಣದ ಶಿವಸೇನಾ ಕಾರ್ಯಕರ್ತರ ಬಂಧನದ ನಂತರ ದಾದರ್‌ ಪೊಲೀಸ್‌ ಠಾಣೆಗೆ ಭೇಟಿ ನೀಡಿದಅರವಿಂದ್‌ ಸಾವಂತ್‌, ‘ನಮ್ಮ ಬಂಧಿತ ಕಾರ್ಯಕರ್ತರನ್ನು ಬಿಡುಗಡೆ ಮಾಡದೇ ಇದ್ದರೆ, ಸರವಣಕರ್‌ ಅವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ, ನಿಜವಾದ ‘ಶಿವಸೇನಾ’ ಯಾವುದು ಎಂದು ಜನರಿಗೆ ಗೊತ್ತಾಗಲಿದೆ’ ಎಂದು ಹೇಳಿದ್ದಾರೆ.

‘ಗಣೇಶ ವಿಸರ್ಜನೆಯ ನಂತರ ಎರಡೂ ಬಣಗಳ ಮಧ್ಯೆ ಉಂಟಾದ ಮಾತಿನ ಚಕಮಕಿಯಿಂದ ಘರ್ಷಣೆ ಪ್ರಾರಂಭವಾಗಿದೆ. ಆಗ ಸರವಣಕರ್‌ ಗುಂಡು ಹಾರಿಸಿದ್ದಾರೆ. ಇದಕ್ಕೆ ಅಲ್ಲಿದ್ದ ಪೊಲೀಸರೇ ಸಾಕ್ಷಿ. ನಮ್ಮ ಕಾರ್ಯಕರ್ತರು ಪ್ರತಿಸ್ಪರ್ಧಿ ಬಣದ ವಿರುದ್ಧ ದಾದರ್‌ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರನ್ನು ಸ್ವೀಕರಿಸಲಿಲ್ಲ’ ಎಂದು ಆರೋಪಿಸಿದ್ದಾರೆ.

ಆದರೆ, ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಒಂದು ವೇಳೆ ಪೊಲೀಸರು ವಿಚಾರಣೆಗೆ ಕರೆದರೆ, ಅವರಿಗೆ ಸಹಕರಿಸುವುದಾಗಿ ಸರವಣಕರ್‌ ಹೇಳಿದ್ದಾರೆ.

ಶಿಂದೆ ಬಣದ ವಕ್ತಾರರಾದ ಕಿರಣ್‌ ಪಾವಸ್ಕರ್‌ ಅವರು ಸಹ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ‘ಸರವಣಕರ್‌ ಅವರಿಗೆ ‘ವೈ‘ ಶ್ರೇಣಿಯ ಭದ್ರತಾ ಸೌಲಭ್ಯವಿದೆ. ಇಂತಹ ಸಮಯದಲ್ಲಿ ಅವರು ಸಾರ್ವಜನಿಕವಾಗಿ ಗುಂಡು ಹಾರಿಸುವುದು ಅಸಾಧ್ಯ. ಈ ಆರೋಪಗಳೆಲ್ಲ ಬಾಲಿಶ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT