‘ ಭಾರತ್ ಜೋಡೊ’ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದೆ: ಕನ್ಹಯ್ಯ ಕುಮಾರ್

ನವದೆಹಲಿ: ‘ಭಾರತ ಜೋಡೊ’ ಯಾತ್ರೆಯು ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ತನ್ನ ಉದ್ದೇಶವನ್ನು ಯಶಸ್ವಿಯಾಗಿ ಈಡೇರಿಸುತ್ತಾ ಮುಂದೆ ಸಾಗುತ್ತಿದೆ ಕಾಂಗ್ರೆಸ್ ಭಾನುವಾರ ತಿಳಿಸಿದೆ.
ಎಐಸಿಸಿ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್, ‘ಯಾತ್ರೆಯು ನಿರೀಕ್ಷೆಯನ್ನೂ ಮೀರಿ ಯಶಸ್ವಿಯಾಗುತ್ತಿದೆ. ಯಾತ್ರೆ ಆರಂಭವಾದಾಗ ಜನರು ಆಗಮಿಸುತ್ತಾರೋ ಇಲ್ಲವೋ, ದಿನಕ್ಕೆ 25 ಕಿ.ಮೀ ಸಾಗಲು ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬ ಹಲವು ಪ್ರಶ್ನೆಗಳಿದ್ದವು. ಆದರೆ ಈಗ 60 ದಿನಗಳು ಪೂರ್ಣಗೊಂಡಿವೆ’ ಎಂದು ಹೇಳಿದರು.
‘ಯಾತ್ರೆಯು ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿದೆ ಎಂದು ಜನರಿಗೆ ಅರಿವಾಗಿದೆ. ಈ ಮೂಲಕ ಯಾತ್ರೆಯ ಮೊದಲ ಉದ್ದೇಶ ಈಡೇರಿದೆ. ಹಾಗೆಯೇ ದೇಶದ ಮತ್ತು ಜನರ ಸಮಸ್ಯೆಗಳಿಗೆ ಸರ್ಕಾರವನ್ನು ಹೊಣೆಯಾಗಿಸುವುದು ಯಾತ್ರೆಯ ಎರಡನೇ ಉದ್ದೇಶ. ಈ ನಿಟ್ಟಿನಲ್ಲಿ ಅದು ಸಾಗುತ್ತಿದೆ ’ ಎಂದು ಹೇಳಿದರು.
ಇದೇ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರಲು ಹರಡುತ್ತಿದ್ದ ಸುಳ್ಳುಗಳು ಯಾತ್ರೆಯ ಮೂಲಕ ನಾಶವಾಗುತ್ತಿವೆ. ಅವರ ನೈಜ ವ್ಯಕ್ತಿತ್ವ ಇಡೀ ದೇಶದ ಮುಂದೆ ಅನಾವರಣಗೊಳ್ಳುತ್ತಿದೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.