ಪತ್ರಕರ್ತ ಗೋವೆಂದರ್‌ಗೆ ವಿ.ಕೆ. ಕೃಷ್ಣ ಮೆನನ್ ಪ್ರಶಸ್ತಿ

ಸೋಮವಾರ, ಮೇ 27, 2019
27 °C

ಪತ್ರಕರ್ತ ಗೋವೆಂದರ್‌ಗೆ ವಿ.ಕೆ. ಕೃಷ್ಣ ಮೆನನ್ ಪ್ರಶಸ್ತಿ

Published:
Updated:

ಲಂಡನ್: ವಸಾಹತುಮುಕ್ತ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ, ಭಾರತೀಯ ಮೂಲದ ಪತ್ರಕರ್ತ ಜಿ.ಡಿ. ರಾಬರ್ಟ್ ಗೋವೆಂದರ್ ಅವರಿಗೆ ಮರಣೋತ್ತರವಾಗಿ ‘ವಿ.ಕೆ. ಕೃಷ್ಣ ಮೆನನ್’ ಪ್ರಶಸ್ತಿ ನೀಡಲಾಗಿದೆ. 

‘ಭಾರತೀಯ ರಾಯಭಾರಿ ಹಾಗೂ ರಾಜಕಾರಣಿ ವಿ.ಕೆ. ಕೃಷ್ಣ ಮೆನನ್ ಅವರ 123ನೇ ಜನ್ಮವರ್ಷಾಚರಣೆ ವೇಳೆ ಗೋವೆಂದರ್‌ಗೆ ಪ್ರಶಸ್ತಿ ನೀಡಲು ನಿರ್ಣಯಿಸಲಾಗಿತ್ತು’ ಎಂದು ವಿ.ಕೆ. ಕೃಷ್ಣ ಮೆನನ್ ಸಂಸ್ಥೆಯ ಟೋನಿ ಸ್ಲೇಟರ್ ತಿಳಿಸಿ
ದ್ದಾರೆ.  ‍

ದಕ್ಷಿಣ ಆಫ್ರಿಕಾದಲ್ಲಿ ಶ್ವೇತವರ್ಣೀಯರಿಗಷ್ಟೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿತ್ತು. ಇದನ್ನು ಬಹಿಷ್ಕರಿಸಬೇಕೆಂದು ಕರೆ ನೀಡಿದ ಮೊದಲ ಪತ್ರಕರ್ತ ಇವರಾಗಿದ್ದರು.  ‘ಮೆನನ್‌ ರೀತಿ ಗೋವೆಂದರ್ ಸಹ ನಿಸ್ವಾರ್ಥರಾಗಿದ್ದರು’ ಎಂದು ಸ್ಲೇಟರ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 1930ರಲ್ಲಿ ಜನಿಸಿದ್ದ ಇವರು, 2016ರಲ್ಲಿ ನಿಧನರಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !