ಡೊನಾಲ್ಡ್ ಟ್ರಂಪ್ ‘ಮೂರ್ಖ’: ಹಸನ್‌ ರೌಹಾನಿ

7

ಡೊನಾಲ್ಡ್ ಟ್ರಂಪ್ ‘ಮೂರ್ಖ’: ಹಸನ್‌ ರೌಹಾನಿ

Published:
Updated:
Prajavani

ಟೆಹರಾನ್: ಇರಾನ್ ಕ್ರಾಂತಿಯ 40ನೇ ವರ್ಷಾಚರಣೆಯ ಸಂದರ್ಭದಲ್ಲಿ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅಮೆರಿಕ ವಿರುದ್ಧ ಹರಿಹಾಯ್ದಿದ್ದಾರೆ.

ಇಲ್ಲಿನ ‘ಆಜಾದಿ ಸ್ಕ್ವೇರ್‌’ನಲ್ಲಿ  ಸೇರಿದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ರೌಹಾನಿ, ‘ಇರಾನ್‌ ಬೀದಿಗಿಳಿದಿರುವ ಈ ಜನ ಸಮೂಹದ ಮೇಲೆ ಶತ್ರುಗಳು ನಡೆಸುವ ಯಾವ ದಾಳಿಯೂ ಗುರಿ ತಲುಪುವುದಿಲ್ಲ’ ಎಂದರು. ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿಕೊಂಡು ಬಂದಿದ್ದ ಭಾಷಣವನ್ನು ಓದಿದ ರೌಹಾನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ‘ಮೂರ್ಖ’ ಎಂದು ಜರಿದಿದ್ದಾರೆ.

‌ಫೆಬ್ರುವರಿ 1979ರಲ್ಲಿ ಬುರ್ಖಾ ತೊಟ್ಟ ಇರಾನಿ ಮಹಿಳೆಯರು, ಸೈನಿಕರು, ಸೇನಾ ಸಮವಸ್ತ್ರ ತೊಟ್ಟ ಸ್ವಯಂಸೇವಕರು ಹಾಗೂ ಸಾವಿರಾರು ನಾಗರಿಕರು ಸೇರಿ ನಡಸಿದ ಇರಾನ್‌ ಕ್ರಾಂತಿ, ರುಹೊಲ್ಲಾ ಖೊಮೇನಿ ಸರ್ವಾಧಿಕಾರಿ ಆಡಳಿತವನ್ನು ಅಂತ್ಯಗೊಳಿಸುವಲ್ಲಿ ಸಫಲವಾಗಿತ್ತು. ಇದರ 40ನೇ ವರ್ಷಾಚರಣೆ ಸಂದರ್ಭದಲ್ಲಿ ರೌಹಾನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಡಳಿತ ವೈಖರಿ ಹಾಗೂ ಇರಾನ್ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಬಗ್ಗೆ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !