ಬೆಂಗಳೂರು: 2022–23ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೋಮವಾರ ಪ್ರಕಟಿಸಿದೆ.
ಮಾರ್ಚ್ 9ರಿಂದ 29ರವರೆಗೆ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 9ರಂದು ಕನ್ನಡ, ಅರೇಬಿಕ್, 11ರಂದು
ಗಣಿತ, ಶಿಕ್ಷಣಶಾಸ್ತ್ರ, 13ರಂದು ಅರ್ಥಶಾಸ್ತ್ರ, 14ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ವಿಜ್ಞಾನ, ಮೂಲಗಣಿತ, 15 ರಂದು ತಮಿಳು, ತೆಲುಗು, ಮಲಯಾಳ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, 16ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, 17ರಂದು ಮಾಹಿತಿ ತಂತ್ರ
ಜ್ಞಾನ, ರೀಟೈಲ್, ಆಟೊಮೊಬೈಲ್, ಆರೋಗ್ಯರಕ್ಷಣೆ, ಸೌಂದರ್ಯ ಮತ್ತು ಕ್ಷೇಮಶಾಸ್ತ್ರ, 18ರಂದು ಭೂಗೋಳ ವಿಜ್ಞಾನ, ಜೀವ ವಿಜ್ಞಾನ, 20ರಂದು ಇತಿಹಾಸ, ಭೌತವಿಜ್ಞಾನ, 21ರಂದು ಹಿಂದಿ, 23ರಂದು ಇಂಗ್ಲಿಷ್, 25ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, 27ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ವಿಜ್ಞಾನ, ಗೃಹ ವಿಜ್ಞಾನ, 29ರಂದು ಸಮಾಜ ವಿಜ್ಞಾನ, ವಿದ್ಯುನ್ಮಾನ, ಗಣಕ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಪರೀಕ್ಷಾ ಅಂತಿಮ ವೇಳಾಪಟ್ಟಿಯನ್ನು www.sslc.karnataka.gov.in ವೆಬ್‌ಸೈಟ್‌ನಲ್ಲೂ ವೀಕ್ಷಿಸಬಹುದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.