ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಐಎಎಸ್‌ ಅಧಿಕಾರಿಗಳಿಗೆ ಬಡ್ತಿ

Last Updated 1 ಜನವರಿ 2022, 16:10 IST
ಅಕ್ಷರ ಗಾತ್ರ

ಬೆಂಗಳೂರು: 1997ರಿಂದ 2018ರ ಅವಧಿಯಲ್ಲಿನ ಐದು ಬ್ಯಾಚ್‌ಗಳ 30 ಐಎಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಬಡ್ತಿ ಹೊಂದಿದ ಎಲ್ಲರನ್ನೂ ಅದೇ ಹುದ್ದೆಗಳಲ್ಲಿ ಮುಂದುವರಿಸಲಾಗಿದೆ.

1997ರ ಬ್ಯಾಚ್‌ನ ಐಎಎಸ್‌ ಅಧಿಕಾರಿಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ.ಎಸ್‌. ಸೆಲ್ವಕುಮಾರ್‌, ಐಎಂಎ ಪ್ರಕರಣದ ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯಾಗಿರುವ ಹರ್ಷ ಗುಪ್ತ ಮತ್ತು ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರಿಗೆ ‘ಹಿರಿಯ ಆಡಳಿತಾತ್ಮಕ ವೇತನ ಶ್ರೇಣಿ’ಗೆ ಬಡ್ತಿ ನೀಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸೆಲ್ವಕುಮಾರ್‌ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಲಾಗಿದೆ.

ಹರ್ಷ ಗುಪ್ತ ಮತ್ತು ಬಿಸ್ವಾಸ್‌ ಅವರ ಹುದ್ದೆಗಳನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಮ ಎಂದುಘೋಷಿಸಲಾಗಿದೆ.

2006ರ ಬ್ಯಾಚ್‌ನ ಐವರು ಐಎಎಸ್‌ ಅಧಿಕಾರಿಗಳಿಗೆ ಸೂಪರ್‌ ಟೈಂ ವೇತನ ಶ್ರೇಣಿಗೆ, 2009ರ ಬ್ಯಾಚ್‌ನ ಐವರು ಅಧಿಕಾರಿಗಳಿಗೆ ಆಯ್ಕೆ ಶ್ರೇಣಿಗೆ ಬಡ್ತಿ ನೀಡಲಾಗಿದೆ. 2013ರ ಬ್ಯಾಚ್‌ನ ಎಂಟು ಧಿಕಾರಿಗಳಿಗೆ ಕಿರಿಯ ಆಡಳಿತಾತ್ಮಕ ವೇತನ ಶ್ರೇಣಿಗೆ ಮತ್ತು 2018ರ ಬ್ಯಾಚ್‌ನ ಒಂಬತ್ತು ಅಧಿಕಾರಿಗಳಿಗೆ ‘ಸೀನಿಯರ್‌ ಟೈಂ ವೇತನ ಶ್ರೇಣಿ’ಗೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT