ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಟೇಟ್‌ಗಳು ಕೃಷಿ ಭೂಮಿಯಲ್ಲ: ಹೈಕೋರ್ಟ್ ಅಭಿಪ್ರಾಯ

Last Updated 4 ಫೆಬ್ರುವರಿ 2021, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಫಿ, ಏಲಕ್ಕಿ, ಮೆಣಸು, ರಬ್ಬರ್ ಮತ್ತು ಚಹಾ ರೀತಿಯ ಬೆಳೆ ಬೆಳೆಯುವ ತೋಟಗಳನ್ನು (ಎಸ್ಟೇಟ್ಸ್‌) ಕೃಷಿ ಭೂಮಿ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್‌ ನಿರ್ಮಾಣ (ಸರ್ಫೇಸಿ) ಕಾಯ್ದೆಯ ಸೆಕ್ಷನ್ 31(ಐ) ಪ್ರಕಾರ, ಈ ತೋಟಗಳು ಕೃಷಿ ಭೂಮಿಯ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ’ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ ಹೇಳಿತು.

‘ಒಂದು ಹಣಕಾಸು ಸಂಸ್ಥೆಗೆ ಅಡಮಾನ ಇಟ್ಟ ಭೂಮಿಯು ಕೃಷಿಯೇತರ ಉದ್ದೇಶ ಅಥವಾ ತೋಟಗಳಾಗಿ ಪರಿವರ್ತನೆಯಾಗಿ
ದ್ದರೆ ಆ ಆಸ್ತಿಯ ವಿರುದ್ಧ ಬ್ಯಾಂಕ್‌ಗಳು ಕ್ರಮ ಜರುಗಿಸಲು ಅವಕಾಶ ಇದೆ. ಅಲ್ಲದೇ, ಈ ಭೂಮಿಗೆ ಭೂಸುಧಾರಣಾ ಕಾಯ್ದೆಯನ್ನು ಅನ್ವಯಿಸಲು ಆಗುವುದಿಲ್ಲ’ ಎಂದು ತಿಳಿಸಿತು.

ಚಿಕ್ಕಮಗಳೂರು ಜಿಲ್ಲೆಯ ಹಿರೆಕೊಳಲೆ, ಯಲಗುಡಿಗೆ ಮತ್ತು ಆಲ್ದೂರು ಗ್ರಾಮಗಳಲ್ಲಿ 1998–2004ರ ಅವಧಿಯಲ್ಲಿ ತೋಟಗಳನ್ನು ಭದ್ರತೆಯಾಗಿಟ್ಟು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲಾಗಿತ್ತು. ಸಾಲ ಮರುಪಾವತಿಯಾಗದ ಕಾರಣ ಸ್ವತ್ತುಗಳ ಮಾರಾಟಕ್ಕೆ ಬ್ಯಾಂಕ್‌ಗಳು ಮುಂದಾಗಿದ್ದವು. ತೋಟಗಳ ಮಾಲೀಕರು ನ್ಯಾಯಾಲಯದ ಮೊರೆ ಹೊಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT