ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಅರ್ಜಿ

Last Updated 2 ಫೆಬ್ರುವರಿ 2022, 16:47 IST
ಅಕ್ಷರ ಗಾತ್ರ

ಬೆಂಗಳೂರು: ’ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಹೈಕೋರ್ಟ್‌ ಸೇರಿದಂತೆ ರಾಜ್ಯದಾದ್ಯಂತ ಎಲ್ಲ ಕೋರ್ಟ್ ಹಾಲ್‌ಗಳಲ್ಲಿ ಅಳವಡಿಸಲು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶಿಸಬೇಕು‘ ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತಂತೆ ನಗರದ ಜೆ.ಜಗನ್‌ಕುಮಾರ್ ಎಂಬುವರು ರಿಟ್‌ ಅರ್ಜಿಯೊಂದನ್ನು ದಾಖಲಿಸಿದ್ದು ಇದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಅರ್ಜಿಯಲ್ಲಿ ಏನಿದೆ?: ’ಅಂಬೇಡ್ಕರ್‌ ಅವರು ಸ್ವತಂತ್ರ ಭಾರತದ ಪಿತಾಮಹರಲ್ಲಿ ಒಬ್ಬರು.ಇಂತಹ ಮಹನೀಯರ ಭಾವಚಿತ್ರ ಯಾವುದೇ ಕೋರ್ಟ್‌ ಹಾಲ್‌ನಲ್ಲಿ ಕಾಣಸಿಗುವುದು ಅಪರೂಪ ಎಂಬಂತಾಗಿದೆ. ಈ ದಿಸೆಯಲ್ಲಿ ನಾನು ಅವರ ಭಾವಚಿತ್ರವನ್ನು ರಾಜ್ಯದ ಎಲ್ಲ ಕೋರ್ಟ್‌ ಹಾಲ್‌ಗಳಲ್ಲಿ ಹಾಕುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ 2019ರ ಡಿಸೆಂಬರ್ 27ರಂದೇ ಪತ್ರ ಬರೆದಿದ್ದೆ. ಆದರೆ, ಈ ಪತ್ರಕ್ಕೆ ನನಗೆ ಈತನಕ ಯಾವುದೇ ಉತ್ತರ ಬಂದಿರುವುದಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT