ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ 150 ವಾಹನಗಳಿಗೆ ಶಾ ಹಸಿರು ನಿಶಾನೆ

Last Updated 16 ಜನವರಿ 2021, 13:56 IST
ಅಕ್ಷರ ಗಾತ್ರ

ಬೆಂಗಳೂರು: ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ (ಇಆರ್‌ಎಸ್‌ಎಸ್‌) 150 ವಾಹನಗಳಿಗೆ ವಿಧಾನಸೌಧದ ಮೆಟ್ಟಿಲುಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಹಸಿರು ನಿಶಾನೆ ತೋರಿಸಿದರು.

ಸಂಜೆ 6.55ಕ್ಕೆ ವೇದಿಕೆಗೆ ಬಂದ ಶಾ ಅವರಿಗೆ ಆರಂಭದಲ್ಲಿ ಪೊಲೀಸ್‌ ಇಲಾಖೆಯಿಂದ ಗಾರ್ಡ್ ಆಫ್‌ ಆನರ್‌ ನೀಡಲಾಯಿತು. ಬಳಿಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಇತರ ಸಚಿವರ ಜೊತೆ ವಾಹನಗಳಿಗೆ ಶಾ ಚಾಲನೆ ನೀಡಿದರು.

ಕಾರ್ಯಕ್ರಮ ನಿಗದಿಗಿಂತ ವಿಳಂಬವಾಗಿ ನಡೆದ ಕಾರಣ, ಶಾ ಅವರು ಭಾಷಣ ಮಾಡಲಿಲ್ಲ. ಬಳಿಕ ಅವರು ವಿಧಾನಸೌಧದ ಬ್ಯಾಂಕ್ವೆಟ್‌ ಮುಂಭಾಗದಲ್ಲಿ ರಾಜ್ಯ ಪೊಲೀಸ್‌ ಇಲಾಖೆ ಏರ್ಪಡಿಸಿದ್ದ, ಇಲಾಖೆ ಸಾಧನೆಗಳ ವಸ್ತು ಪ್ರದರ್ಶನವನ್ನು ಅಮಿತ್‌ ಶಾ ವೀಕ್ಷಿಸಿದರು. ಅಮಿತ್ ಶಾ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಂಪುಟ ಸಹೋದ್ಯೋಗಿಗಳು ಜೊತೆಗಿದ್ದರು.

ಒಂದು ಭಾರತ– ಒಂದು ತುರ್ತು ಸಂಖ್ಯೆ: ತುರ್ತು ಸ್ಪಂದನ ಸಹಾಯ ವ್ಯವಸ್ಥೆಯು (ಇಆರ್‌ಎಸ್‌ಎಸ್‌) ದೇಶದಾದ್ಯಂತ ಒಂದು ತುರ್ತು ಸಂಖ್ಯೆ 112 ಅನ್ನು ಹೊಂದಿದ್ದು, ರಾಜ್ಯದಲ್ಲಿ ಸದ್ಯ 505 ತುರ್ತು ಸ್ಪಂದನ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಶನಿವಾರ ಹೊಸತಾಗಿ ಇನ್ನೂ 150 ವಾಹನಗಳು ಕಾರ್ಯನಿರ್ವಹಣೆಯಲ್ಲಿ ಸೇರ್ಪಡೆಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT