ಶುಕ್ರವಾರ, ಡಿಸೆಂಬರ್ 3, 2021
26 °C

ಬೆಂಗಳೂರು ಉಸ್ತುವಾರಿ ಸಿಎಂ ವಹಿಸಿಕೊಳ್ಳಲಿ: ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಂಗಳೂರು ಜಿಲ್ಲಾ ಉಸ್ತುವಾರಿಯ ವಿಚಾರ ಚುನಾವಣೆ ಬಳಿಕ ನಿರ್ಧಾರವಾಗಬಹುದು. ನನ್ನ ಅಭಿಪ್ರಾಯದ ಪ್ರಕಾರ, ಅದು ಮುಖ್ಯಮಂತ್ರಿಯವರ ಬಳಿ ಇದ್ದರೆ ಸೂಕ್ತ’ ಎಂದು ಅಶ್ವತ್ಥನಾರಾಯಣ ಹೇಳಿದರು.

ಜಿಲ್ಲಾ ಉಸ್ತುವಾರಿ ಸಂಬಂಧಿಸಿದಂತೆ ಕಂದಾಯ ಸಚಿವ ಆರ್‌.ಅಶೋಕ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರ ಮಧ್ಯೆ ಇತ್ತೀಚೆಗೆ ಮಾತಿನ ಜಟಾಪಟಿ ನಡೆದಿತ್ತು. ಬೆಂಗಳೂರಿನ ಹಿರಿಯ ಸಚಿವರಿಗೆ ಉಸ್ತುವಾರಿ ನೀಡಬೇಕು ಎಂದು ಸೋಮಣ್ಣ ಆಗ್ರಹಿಸಿದ್ದರು. ಉಸ್ತುವಾರಿಯ ಮೇಲೆ ಅಶೋಕ, ಸೋಮಣ್ಣ ಸೇರಿದಂತೆ ಹಲವು ಸಚಿವರು ಕಣ್ಣು ಹಾಕಿದ್ದಾರೆ.

‘ಮುಖ್ಯಮಂತ್ರಿ ಬಳಿ ಉಸ್ತುವಾರಿ ಇದ್ದರೆ ಅನುದಾನ ಬೇಗನೇ ಸಿಗುತ್ತದೆ. ಕಾಮಗಾರಿಗಳಿಗೂ ತ್ವರಿತವಾಗಿ ಅನುಮತಿ ಸಿಗುತ್ತದೆ ಮತ್ತು ಪೂರ್ಣಗೊಳಿಸಲು ಸಾಧ್ಯ. ನಗರದಲ್ಲಿ ಮಳೆ ನಿಂತ ಕೂಡಲೇ ರಸ್ತೆಗಳ ಗುಂಡಿ ಮುಚ್ಚುವುದು, ಡಾಂಬರೀಕರಣ ಸೇರಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು