ಬುಧವಾರ, ಸೆಪ್ಟೆಂಬರ್ 22, 2021
21 °C

ದ್ವಿಚಕ್ರ ವಾಹನ ಕಳ್ಳನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮನೆಯ ಎದುರು ಹಾಗೂ ಇತರೆ ಸ್ಥಳಗಳಲ್ಲಿ ನಿಲುಗಡೆ ಮಾಡಿರುವ ದ್ವಿಚಕ್ರ ವಾಹನಗಳನ್ನು ಯಾರೂ ಇಲ್ಲದ ಹೊತ್ತಿನಲ್ಲಿ ಕದಿಯುತ್ತಿದ್ದ ಆರೋಪಿ ಜಮೀರ್‌ ಪಾಷಾ ಯಾನೆ ‘ಚಿಂದಿ’ಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹ 5 ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. 

‘ಮೋದಿ ಆಸ್ಪತ್ರೆ ಎದುರು ನಿಲ್ಲಿಸಿದ್ದ ಹೀರೊ ಹೊಂಡ ಸ್ಪ್ಲೆಂಡರ್‌ ಬೈಕ್‌ ಕಳುವಾಗಿರುವ ಸಂಬಂಧ ವ್ಯಕ್ತಿಯೊಬ್ಬರು ಆಗಸ್ಟ್‌ 31ರಂದು ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ 24 ಗಂಟೆಗಳೊಳಗೆ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಕೋಲಾರ ಜಿಲ್ಲೆ ಮುಳಬಾಗಿಲಿನವನಾದ ಆರೋಪಿಯು ಕೆ.ಆರ್‌.ಪುರ, ಬಾಣಸವಾಡಿ, ಕೃಷ್ಣರಾಜ ಮಾರುಕಟ್ಟೆ, ಕಾಡುಗೊಂಡನಹಳ್ಳಿ, ಭಾರತೀನಗರ ಹಾಗೂ ನಗರದ ಇತರೆ ಭಾಗಗಳಿಂದ ಬೈಕ್‌ಗಳನ್ನು ಕದ್ದು ಮುಳಬಾಗಿಲಿಗೆ ಸಾಗಿಸುತ್ತಿದ್ದ. ಅಲ್ಲಿ ಗ್ಯಾರೆಜ್‌ವೊಂದನ್ನು ನಡೆಸುತ್ತಿದ್ದ ಆತ ಕದ್ದ ವಾಹನಗಳ ಬಿಡಿಭಾಗಗಳನ್ನು ತೆಗೆದು ರಿಪೇರಿಗೆ ತರುತ್ತಿದ್ದ ವಾಹನಗಳಿಗೆ ಜೋಡಿಸುತ್ತಿದ್ದ. ಬಸವೇಶ್ವರ ಠಾಣೆ ವ್ಯಾಪ್ತಿಯಲ್ಲಿ ಎರಡು ಬೈಕ್‌ಗಳನ್ನು ಕದ್ದಿರುವ ವಿಚಾರವನ್ನೂ ಆತ ಒಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.