ಸಿದ್ದರಾಮಯ್ಯ ಬಣದ ಒಳ ಏಟಿಗೆ ತತ್ತರಿಸಿದ ಡಿ.ಕೆ.ಶಿವಕುಮಾರ್: ಬಿಜೆಪಿ

ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್‌ನಲ್ಲಿ ಮಹಾ ಸ್ಫೋಟಕ್ಕೆ ಕಾರಣವಾಗಲಿದೆ ಎಂದು ಬಿಜೆಪಿ ಹೇಳಿದೆ.
ಫಲಿತಾಂಶಕ್ಕೆ ಸಂಬಂಧಿಸಿ ಪಕ್ಷದ ಕರ್ನಾಟಕ ಘಟಕವು ಸರಣಿ ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ಬಣದ ಒಳ ಏಟಿಗೆ ಡಿ.ಕೆ.ಶಿವಕುಮಾರ್ ತತ್ತರಿಸಿಹೋಗಿದ್ದಾರೆ ಎಂದು ಹೇಳಿದೆ.
‘ಸಿದ್ದರಾಮಯ್ಯ ಅವರ ಬಣ ನೀಡುತ್ತಿರುವ ಒಳ ಏಟಿನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತತ್ತರಿಸಿ ಹೋಗಿದ್ದಾರೆ. ಉಪಚುನಾವಣೆ ಫಲಿತಾಂಶದ ದಿನವೇ ಡಿಕೆಶಿ ಅವರು ವಿಷಾದದ ಮಾತುಗಳನ್ನಾಡಿದ್ದಾರೆ. ಗೆಲುವನ್ನು ಸಂಭ್ರಮಿಸುವುದಕ್ಕೂ ಕೆಪಿಸಿಸಿ ಅಧ್ಯಕ್ಷರಿಗೆ ಅವರಿಗೆ ಸಾಧ್ಯವಾಗುತ್ತಿಲ್ಲವೇ’ ಎಂದು ಬಿಜೆಪಿ ಪ್ರಶ್ನಿಸಿದೆ.
ಓದಿ: ಹಾನಗಲ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವು
‘ಒಂದು ಹುದ್ದೆಗೆ ಮೂರ್ನಾಲ್ಕು ಆಕಾಂಕ್ಷಿಗಳು, ಕುರ್ಚಿ ಕಾಲಿ ಮಾಡಿಸಲು ಪ್ರಯತ್ನ ಮಾಡುತ್ತಾರೆ, ಮ್ಯೂಸಿಕಲ್ ಚೇರ್‌ನಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಡಿಕೆಶಿ ಅವರು ವಿಷಾದ ವ್ಯಕ್ತಪಡಿಸುತ್ತಿರುವುದೇಕೆ? ಹಾನಗಲ್ ಫಲಿತಾಂಶದ ಕ್ರೆಡಿಟ್‌ಗಾಗಿ ಕಾಂಗ್ರೆಸ್‌ನಲ್ಲಿ ಒಳಜಗಳ ತೀವ್ರಗೊಂಡಿದೆ’ ಎಂದು ಬಿಜೆಪಿ ಹೇಳಿದೆ.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ತಾನು ಸಿಎಂ ಆಕಾಂಕ್ಷಿ ಎಂದು ಮತ್ತೆ ವಾದ ಮಂಡಿಸಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಡಿಕೆಶಿ ಅವರನ್ನು ಬಗ್ಗುಬಡಿಯುವ ಪ್ರಯತ್ನ ನಡೆಯುತ್ತಿದೆ. ಮತ್ತೆ ಮತ್ತೆ ಹೇಳುತ್ತಿದ್ದೇವೆ, ಡಿಕೆಶಿ ಕಾಸು, ಸಿದ್ದರಾಮಯ್ಯ ಬಾಸು’ ಎಂದು ಬಿಜೆಪಿ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.
‘ಕೆಲವರು ರಾಜಕೀಯದಲ್ಲಿ ಅಜೆಂಡಾ ಇಟ್ಟುಕೊಂಡಿರುತ್ತಾರೆ, ಮೂರ್ನಾಲ್ಕು ಆಕಾಂಕ್ಷಿಗಳು ಇರುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೂ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಸಿದ್ದರಾಮಯ್ಯ ಅವರ ಬಯಕೆಗೂ ಸಂಬಂಧವಿದೆ. ಉಪಚುನಾವಣೆ ಫಲಿತಾಂಶವು ಕಾಂಗ್ರೆಸ್ ಪಕ್ಷದಲ್ಲಿ ಮಹಾ ಸ್ಫೋಟಕ್ಕೆ ಕಾರಣವಾಗಲಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಓದಿ: ಸಿಂದಗಿ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರಗೆ ಭರ್ಜರಿ ಗೆಲುವು
‘ಡಿಕೆಶಿ ಅವರೇ ಯಾರ ಖುರ್ಚಿ ಖಾಲಿ ಮಾಡಲಾಗುತ್ತಿದೆ? ಯಾವ ಖುರ್ಚಿಗೆ ಎಷ್ಟು ಆಕಾಂಕ್ಷಿಗಳು? ಮ್ಯೂಸಿಕಲ್ ಚೇರ್‌ನಲ್ಲಿ ಯಾರ್‍ಯಾರು ಸಿಕ್ಕಿಕೊಂಡಿದ್ದಾರೆ? ದೀಪಾವಳಿಯ ಹೊಸ್ತಿಲಲ್ಲೂ ಇಷ್ಟೊಂದು ವಿಷಾದವೇಕೆ’ ಎಂದು ಡಿಕೆಶಿ ಅವರ ಹೇಳಿಕೆಯ ವಿಡಿಯೊವನ್ನು #ಅವಕಾಶವಾದಿಕಾಂಗ್ರೆಸ್ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿ ಬಿಜೆಪಿ ಪ್ರಶ್ನಿಸಿದೆ.
‘ಉಪಚುನಾವಣೆಗೆ ಮುನ್ನ ಈ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ಈಗ ಈ ಫಲಿತಾಂಶ ಕೇಂದ್ರ ಸರ್ಕಾರದ ವಿರುದ್ಧದ ಜನಾದೇಶ ಎನ್ನುತ್ತಿದ್ದಾರೆ. ಸಿಂದಗಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ ಹಾಗಾದರೆ ಸಿಂದಗಿ ಫಲಿತಾಂಶದ ಬಗ್ಗೆ ನಿಮ್ಮ ವ್ಯಾಖ್ಯಾನ ಏನು’ ಎಂದು ಬಿಜೆಪಿ ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರ ಬಣ ನೀಡುತ್ತಿರುವ ಒಳ ಏಟಿನಿಂದ ಕೆಪಿಸಿಸಿ ಅಧ್ಯಕ್ಷ @DKShivakumar ಅವರು ತತ್ತರಿಸಿ ಹೋಗಿದ್ದಾರೆ.
ಉಪಚುನಾವಣೆ ಫಲಿತಾಂಶದ ದಿನವೇ ಡಿಕೆಶಿ ಅವರು ವಿಷಾದದ ಮಾತುಗಳನ್ನಾಡಿದ್ದಾರೆ.
ಗೆಲುವನ್ನು ಸಂಭ್ರಮಿಸುವುದಕ್ಕೂ ಕೆಪಿಸಿಸಿ ಅಧ್ಯಕ್ಷರಿಗೆ ಅವರಿಗೆ ಸಾಧ್ಯವಾಗುತ್ತಿಲ್ಲವೇ?#ಅವಕಾಶವಾದಿಕಾಂಗ್ರೆಸ್
— BJP Karnataka (@BJP4Karnataka) November 2, 2021
ಒಂದು ಹುದ್ದೆಗೆ ಮೂರ್ನಾಲ್ಕು ಆಕಾಂಕ್ಷಿಗಳು, ಚೇರ್ ಕಾಲಿ ಮಾಡಿಸಲು ಪ್ರಯತ್ನ ಮಾಡುತ್ತಾರೆ, ಮ್ಯೂಸಿಕಲ್ ಚೇರ್‌ನಲ್ಲಿ ಸಿಲುಕಿಕೊಂಡಿದ್ದೇವೆ ಎಂದು @DKShivakumar ಅವರು ವಿಷಾದ ವ್ಯಕ್ತಪಡಿಸುತ್ತಿರುವುದೇಕೆ?
ಹಾನಗಲ್ ಫಲಿತಾಂಶದ ಕ್ರೆಡಿಟ್‌ಗಾಗಿ @INCKarnataka ಪಕ್ಷದಲ್ಲಿ ಒಳಜಗಳ ತೀವ್ರಗೊಂಡಿದೆ.#ಅವಕಾಶವಾದಿಕಾಂಗ್ರೆಸ್
— BJP Karnataka (@BJP4Karnataka) November 2, 2021
ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ತಾನು ಸಿಎಂ ಆಕಾಂಕ್ಷಿ ಎಂದು ಮತ್ತೆ ವಾದ ಮಂಡಿಸಿದ್ದಾರೆ.
ಅವಕಾಶ ಸಿಕ್ಕಾಗಲೆಲ್ಲ @DKShivakumar ಅವರನ್ನು ಬಗ್ಗುಬಡಿಯುವ ಪ್ರಯತ್ನ ನಡೆಯುತ್ತಿದೆ.
ಮತ್ತೆ ಮತ್ತೆ ಹೇಳುತ್ತಿದ್ದೇವೆ, ಡಿಕೆಶಿ ಕಾಸು, ಸಿದ್ದರಾಮಯ್ಯ ಬಾಸು.#ಅವಕಾಶವಾದಿಕಾಂಗ್ರೆಸ್
— BJP Karnataka (@BJP4Karnataka) November 2, 2021
ಕೆಲವರು ರಾಜಕೀಯದಲ್ಲಿ ಅಜೆಂಡಾ ಇಟ್ಟುಕೊಂಡಿರುತ್ತಾರೆ, ಮೂರ್ನಾಲ್ಕು ಆಕಾಂಕ್ಷಿಗಳು ಇರುತ್ತಾರೆ ಎಂಬ @DKShivakumar ಅವರ ಹೇಳಿಕೆಗೂ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಸಿದ್ದರಾಮಯ್ಯ ಅವರ ಬಯಕೆಗೂ ಸಂಬಂಧವಿದೆ.
ಉಪಚುನಾವಣೆ ಫಲಿತಾಂಶ @INCKarnataka ಪಕ್ಷದಲ್ಲಿ ಮಹಾ ಸ್ಫೋಟಕ್ಕೆ ಕಾರಣವಾಗಲಿದೆ.#ಅವಕಾಶವಾದಿಕಾಂಗ್ರೆಸ್
— BJP Karnataka (@BJP4Karnataka) November 2, 2021
√ ಡಿಕೆಶಿ ಅವರೇ ಯಾರ ಖುರ್ಚಿ ಖಾಲಿ ಮಾಡಲಾಗುತ್ತಿದೆ?
√ ಯಾವ ಖುರ್ಚಿಗೆ ಎಷ್ಟು ಆಕಾಂಕ್ಷಿಗಳು?
√ ಮ್ಯೂಸಿಕಲ್ ಚೇರ್‌ನಲ್ಲಿ ಯಾರ್‍ಯಾರು ಸಿಕ್ಕಿಕೊಂಡಿದ್ದಾರೆ?
√ ದೀಪಾವಳಿಯ ಹೊಸ್ತಿಲಲ್ಲೂ ಇಷ್ಟೊಂದು ವಿಷಾದವೇಕೆ?#ಅವಕಾಶವಾದಿಕಾಂಗ್ರೆಸ್ pic.twitter.com/QDtNH7YrKB— BJP Karnataka (@BJP4Karnataka) November 2, 2021
ಉಪಚುನಾವಣೆಗೆ ಮುನ್ನ ಈ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ ಎನ್ನುತ್ತಿದ್ದ @INCKarnataka ಪಕ್ಷದ ನಾಯಕರು ಈಗ ಈ ಫಲಿತಾಂಶ ಕೇಂದ್ರ ಸರ್ಕಾರದ ವಿರುದ್ಧದ ಜನಾದೇಶ ಎನ್ನುತ್ತಿದ್ದಾರೆ.
ಸಿಂದಗಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ ಹಾಗಾದರೆ ಸಿಂದಗಿ ಫಲಿತಾಂಶದ ಬಗ್ಗೆ ನಿಮ್ಮ ವ್ಯಾಖ್ಯಾನ ಏನು?#ಅವಕಾಶವಾದಿಕಾಂಗ್ರೆಸ್
— BJP Karnataka (@BJP4Karnataka) November 2, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.