ಶುಕ್ರವಾರ, ಡಿಸೆಂಬರ್ 9, 2022
20 °C

ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ಇಂಧನ ತುಂಬಿಸಿ: ರಾಹುಲ್ ಗಾಂಧಿಗೆ ಬಿಜೆಪಿ ಟಾಂಗ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್ ಪಕ್ಷದ ಭಾರತ ಒಗ್ಗೂಡಿಸಿ ಯಾತ್ರೆ ಕರ್ನಾಟಕ ತಲುಪಿದೆ. ಈ ಮಧ್ಯೆ, ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿರುವ ರಾಜ್ಯ ಬಿಜೆಪಿ, ರಾಹುಲ್ ಗಾಂಧಿಯವರೇ, ನಿಮ್ಮ ಜೋಡೊ ಯಾತ್ರೆಯ ವಾಹನಗಳಿಗೆ ಬಿಜೆಪಿ ಆಡಳಿತದ ರಾಜ್ಯದಲ್ಲೇ ಇಂಧನ ತುಂಬಿಸಿ. ಕಾಂಗ್ರೆಸ್‌ ಆಡಳಿತದ ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ತಾಗಬಹುದು ಎಂದು ಕುಟುಕಿದೆ.

ಟ್ವೀಟ್ ಜೊತೆಗೆ, ಬಿಜೆಪಿ ಮತ್ತು ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿನ ಡೀಸೆಲ್ ದರ ಪಟ್ಟಿಯನ್ನೂ ಬಿಜೆಪಿ ಹಂಚಿಕೊಂಡಿದೆ.

ಇದೇವೇಳೆ, ರಾಹುಲ್ ಗಾಂಧಿಯವರೇ, ಪರಿಶಿಷ್ಟ ಪಂಗಡ ಸಮುದಾಯದವರು ಸುರಕ್ಷಿತವಾಗಿರುವ ಕರುನಾಡಿಗೆ ಸ್ವಾಗತ ಎಂದು ಟ್ವೀಟ್ ಮಾಡಿರುವ ಬಿಜೆಪಿ,
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ಮತ್ತು ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರ ಮೇಲಿನ ಅತ್ಯಾಚಾರ ಪ್ರಕರಣಗಳ ಪಟ್ಟಿ ಹಾಕಿದೆ.

ಇದರ ಜೊತೆಗೆ, ಬಿಜೆಪಿ ಮತ್ತು ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿನ ನಿರುದ್ಯೋಗ ದರಪಟ್ಟಿಯನ್ನೂ ಬಿಜೆಪಿ ಹಂಚಿಕೊಂಡಿದೆ. ರಾಹುಲ್ ಗಾಂಧಿಯವರೇ,ಅಳಿದುಳಿದಿರುವ ಕಾಂಗ್ರೆಸ್‌ ಆಡಳಿತದ ರಾಜ್ಯದ ಯುವಕರಿಗೆ ಉದ್ಯೋಗ ನೀಡುವತ್ತ ಗಮನಹರಿಸಿ ಎಂದು ಕುಟುಕಿದೆ.

ಇದು ಭಾರತ್‌ ಜೋಡೊ ಯಾತ್ರೆಯೋ ಅಥವಾ ಸಿದ್ದು- ಡಿಕೆಶಿ ಜೋಡಿಸುವ ಜಾತ್ರೆಯೋ? ಎಂದು ಕುಟುಕಿರುವ ಬಿಜೆಪಿ, ಇಬ್ಬರೂ ನಾಯಕರ ಕೈಹಿಡಿದು ರಾಹುಲ್ ಗಾಂಧಿ ನಗಾರಿ ಬಾರಿಸುತ್ತಿರುವ ವಿಡಿಯೊ ಹಂಚಿಕೊಂಡಿದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು