ಮುಸ್ಲಿಮರ ಮೇಲೆ ಬಿಜೆಪಿಗೆ ಇಲ್ಲದ ಪ್ರೀತಿ ಇದೀಗ ಬಂದಿದೆ: ಕಾಂಗ್ರೆಸ್ ಟೀಕೆ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಗಲಾಟೆ, ವ್ಯಾಪಾರ ಬಹಿಷ್ಕಾರ, ಕೋಮು ಗಲಭೆ ನಡೆಯುವಾಗ ಮುಸ್ಲಿಮರ ಮೇಲೆ ಬಿಜೆಪಿಗೆ ಇಲ್ಲದ ಪ್ರೀತಿ ಇದೀಗ ಬಂದಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.
ರಾಜ್ಯದಲ್ಲಿ ನಡೆದ ಅನೇಕ ಕೋಮು ಗಲಾಟೆ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಈಗ ಬಿಜೆಪಿಯ ಒಬ್ಬೊಬ್ಬರೇ ನಾಯಕರು ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ! ಎಂದು ಟ್ವಿಟರ್‌ನಲ್ಲಿ ಟೀಕಿಸಿದೆ.
ಹಿಜಾಬ್ ಗಲಾಟೆ, ವ್ಯಾಪಾರ ಬಹಿಷ್ಕಾರ, ಕೋಮು ಬೆಂಕಿ ಹಚ್ಚುವಾಗ ಇಲ್ಲದ ಪ್ರೀತಿ ಈಗ ಬಂದಿದೆ!
ಈಗ ಬಿಜೆಪಿಯ ಒಬ್ಬೊಬ್ಬರೇ ನಾಯಕರು ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ!ಬಣ್ಣ ಬದಲಿಸುವ ಬಿಜೆಪಿಗರನ್ನು ಕಂಡು ಊಸರವಳ್ಳಿಯೂ ನಾಚುತ್ತದೆ!@BJP4Karnataka,
ಇದು ನಿಮ್ಮ ಓಲೈಕೆ ರಾಜಕಾರಣದ ವ್ಯಾಖ್ಯಾನದೊಳಗೆ ಬರುವುದಿಲ್ಲವೇ? pic.twitter.com/JhkyqLhZYv— Karnataka Congress (@INCKarnataka) March 19, 2023
ಬಣ್ಣ ಬದಲಿಸುವ ಬಿಜೆಪಿಗರನ್ನು ಕಂಡು ಊಸರವಳ್ಳಿಯೂ ನಾಚುತ್ತದೆ!. ಬಿಜೆಪಿಯವರಿಗೆ ಇದು ನಿಮ್ಮ ಓಲೈಕೆ ರಾಜಕಾರಣದ ವ್ಯಾಖ್ಯಾನದೊಳಗೆ ಬರುವುದಿಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇವನ್ನೂ ಓದಿ: ನಾಳೆ ಇಡೀ ದಿನ ಬೆಂಗಳೂರಲ್ಲಿ ಆಟೋ ಸೇವೆ ಬಂದ್ ಆಗುವ ಸಾಧ್ಯತೆ
'ಕೋಲಾರ' ಬದಲಿಸುವಂತೆ ಸಿದ್ದರಾಮಯ್ಯಗೆ ಸಲಹೆ; ಹೈಕಮಾಂಡ್ ನಿಲುವಿನಿಂದ ‘ಕೈ’ ತಳಮಳ
ಜವರೇಗೌಡರ ಪುಸ್ತಕ ಏಕೆ ವಿರೋಧಿಸಲಿಲ್ಲ: ಕುಮಾರಸ್ವಾಮಿಗೆ ಶೋಭಾ ಕರಂದ್ಲಾಜೆ ಪ್ರಶ್ನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.