ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update | 3,156 ಹೊಸ ಪ್ರಕರಣ, 31 ಜನ ಸಾವು

Last Updated 5 ನವೆಂಬರ್ 2020, 15:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ಲಸಿಕೆ ಸಂಗ್ರಹಕ್ಕೆ ಸಿದ್ಧತ ಕೆಲಸಗಳು ನಡೆಯುತ್ತಿರುವ ಬೆನ್ನಲೇ ಗುರುವಾರ 3,156 ಹೊಸ ಪ್ರಕರಣಗಳು ವರದಿಯಾಗಿವೆ.

ಇಂದು ಕೋವಿಡ್‌ಗೆ 31 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 8,38,929 ಕ್ಕೆ ಏರಿಕೆಯಾಗಿದೆ. ಒಟ್ಟಾರೆ 11,312 ಜನರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಈವರೆಗೆ 7,94,503 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 33,095 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಇದರಲ್ಲಿ 916 ಜನರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಗುಣಮುಖರಾಗಿ 5723 ಜನರು ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು ಹೊಸದಾಗಿ 1627 ಜನರಿಗೆ ಸೋಂಕು ತಗುಲಿದ್ದು, ಒಟ್ಟಾರೆ 3,45,134 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 3.43 ಲಕ್ಷದ ಗಡಿ ದಾಟಿದೆ. ಇಂದು 9 ಜನರು ಮೃತಪಟ್ಟಿದ್ದು, ಈವರೆಗೂ 3,926 ಮಂದಿ ಸಾವಿಗೀಡಾಗಿದ್ದಾರೆ.

ಬಾಗಲಕೋಟೆಯಲ್ಲಿ 15, ಬಳ್ಳಾರಿ 46, ಬೆಳಗಾವಿ 39, ಬೆಂಗಳೂರು ಗ್ರಾಮಾಂತರ 53, ಬೀದರ್ 06, ಚಾಮರಾಜನಗರ 26, ಚಿಕ್ಕಬಳ್ಳಾಪುರ 104, ಚಿಕ್ಕಮಗಳೂರು 50, ಚಿತ್ರದುರ್ಗ 29, ದಕ್ಷಿಣ ಕನ್ನಡ 83, ದಾವಣಗೆರೆ 54, ಧಾರವಾಡ 58, ಗದಗ 11, ಹಾಸನ 138, ಹಾವೇರಿ 22, ಕಲಬುರಗಿ 31, ಕೊಡಗು 36, ಕೋಲಾರ 57, ಕೊಪ್ಪಳ 8, ಮಂಡ್ಯ 103, ಮೈಸೂರು 169, ರಾಯಚೂರು 10, ರಾಮನಗರ 31, ಶಿವಮೊಗ್ಗ 27, ತುಮಕೂರು 181, ಉಡುಪಿ 47, ಉತ್ತರ ಕನ್ನಡ 45, ವಿಜಯಪುರ 36 ಮತ್ತು ಯಾದಗಿರಿಯಲ್ಲಿ 14 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹೊಸ ಪ್ರಕರಣಗಳು ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT