ಮಂಗಳವಾರ, ಜೂನ್ 22, 2021
22 °C

Covid-19 Karnataka Update:ರಾಜ್ಯದಲ್ಲಿ 1143 ಹೊಸ ಪ್ರಕರಣ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಗುರುವಾರ 1143 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಕೆಲ ದಿನಗಳಿಂದ ಸಾವಿರಕ್ಕಿಂತ ಕೆಳಗೆ ಇಳಿದಿದ್ದ ಹೊಸ ಪ್ರಕರಣಗಳ ಸಂಖ್ಯೆ ಇವತ್ತು ಮತ್ತೆ ಹೆಚ್ಚಾಗಿದೆ. ಇಂದು ಕೋವಿಡ್‌ನಿಂದ ಒಂದು ಸಾವು ಮಾತ್ರ ಸಂಭವಿಸಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 12039ಕ್ಕೇರಿದೆ. ‌

ಎಂದಿನಂತೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 642 ಹೊಸ ಪ್ರಕರಣ ಪತ್ತೆಯಾಗಿವೆ. 88 ಪ್ರಕರಣ ಪತ್ತೆಯಾಗಿರುವ ಮೈಸೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. 

ಒಟ್ಟು ಸೋಂಕಿತರ ಸಂಖ್ಯೆ 9,13,483ಕ್ಕೆ ಏರಿದ್ದು, ರಾಜ್ಯದಲ್ಲಿ 13,610 ಸಕ್ರಿಯ ಪ್ರಕರಣಗಳಿವೆ. ಇವತ್ತು 1268 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು