ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತು ರಾಷ್ಟ್ರಗಳ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

Last Updated 25 ಅಕ್ಟೋಬರ್ 2021, 20:05 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಜಗತ್ತಿನ ಒಂಬತ್ತು ರಾಷ್ಟ್ರಗಳ ಪ್ರಯಾಣಿಕರು ವಿದೇಶದಿಂದ ರಾಜ್ಯಕ್ಕೆ ಬಂದಿಳಿದಾಗ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಬ್ರಿಟನ್‌, ದಕ್ಷಿಣ ಆಫ್ರಿಕಾ, ಬ್ರೆಝಿಲ್‌, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಿಯಸ್‌, ನ್ಯೂಜಿಲೆಂಡ್‌ ಮತ್ತು ಜಿಂಬಾಬ್ವೆಯಿಂದ ವಿಮಾನ, ಹಡಗುಗಳ ಮೂಲಕ ರಾಜ್ಯಕ್ಕೆ ಬರುವವರು ತಕ್ಷಣವೇ ಕೋವಿಡ್‌ ಪರೀಕ್ಷೆಗೆ ಮಾದರಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೋವಿಡ್‌ ಲಸಿಕೆಯ ವಿಷಯದಲ್ಲಿ ಭಾರತದ ನೀತಿಯೊಂದಿಗೆ ಸಹಮತ ಹೊಂದಿರುವ ಬ್ರಿಟನ್‌, ಫ್ರಾನ್ಸ್‌, ಜರ್ಮನಿ, ನೇಪಾಳ, ಬೆಲಾರಸ್‌, ಲೆಬನಾನ್‌, ಅರ್ಮೇನಿಯಾ, ಉಕ್ರೇನ್‌, ಬೆಲ್ಜಿಯಂ, ಹಂಗೇರಿ ಮತ್ತು ಸರ್ಬಿಯಾ ರಾಷ್ಟ್ರಗಳಿಂದ ಬರುವವರು ಎರಡು ಡೋಸ್‌ ಲಸಿಕೆ ಪಡೆದಿದ್ದರೆ ಪರೀಕ್ಷೆ ಇಲ್ಲದೆ ತೆರಳಬಹುದು. 14 ದಿನಗಳ ಕಾಲ ನಿಗಾದಲ್ಲಿ ಇರಬೇಕು ಎಂದು ಸೂಚಿಸಲಾಗಿದೆ.

ಕೋವಿಡ್‌ ಲಸಿಕೆ ನೀತಿಯ ಜತೆ ಸಹಮತ ಹೊಂದಿರುವ ರಾಷ್ಟ್ರಗಳಿಂದ ಬಂದಿದ್ದರೂ, ಒಂದು ಡೋಸ್‌ ಪಡೆದಿದ್ದರೆ ಪರೀಕ್ಷೆಗೆ ಮಾದರಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT