ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

45 ವರ್ಷ ದಾಟಿದವರಿಗೆ ಕೋವಿಶೀಲ್ಡ್; ಕೋವ್ಯಾಕ್ಸಿನ್‌ ಎರಡನೇ ಡೋಸ್‌ ಮಾತ್ರ

Last Updated 15 ಮೇ 2021, 16:16 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸುವ ಕುರಿತಂತೆ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಕಾರ್ಯಪಡೆ ಸಭೆ ನಡೆಯಿತು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ಪಿ‌. ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು

ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು

* ಕೋವ್ಯಾಕ್ಸಿನ್ ಅನ್ನು 2ನೇ ಡೋಸ್ ಮಾತ್ರ ಕೊಡುವುದು. ಮೊದಲ ಡೋಸ್ ಪಡೆದು ಆರು ವಾರ ಆಗಿರುವವರು ಮಾತ್ರ 2ನೇ ಡೋಸ್ ಲಸಿಕೆ ಪಡೆಯಬೇಕು. 45 ವರ್ಷ ದಾಟಿದವರಿಗೆ ಕೋವಿಶೀಲ್ಡ್ ಮೊದಲನೇ ಡೋಸ್ ನೀಡಲು ಆದ್ಯತೆ. ಮೊದಲ ಡೋಸ್ ಪಡೆದು 12 ವಾರ ಆದವರಿಗೆ ಮಾತ್ರ ಎರಡನೇ ನೇ ಡೋಸ್ ಕೊಡಬೇಕು.

* ಲಸಿಕೆ ದಾಸ್ತಾನು ನೋಡಿಕೊಂಡು 18- 44 ವರ್ಷದವರಿಗೆ ಯಾವ ದಿನದಿಂದ ಲಸಿಕೆ ಕೊಡಬೇಕು ಎಂದು ತೀರ್ಮಾನ

* ಆದ್ಯತೆ ಮೇರೆಗೆ ಯಾರಿಗೆ ಲಸಿಕೆ ನೀಡಬೇಕೆಂದು ಮೊದಲು ಪಟ್ಟಿ ಮಾಡಬೇಕು (ಅಂಚೆ, ಕೃಷಿ ಇಲಾಖೆ, ಡೆಲಿವರಿ ಬಾಯ್ಸ್, ಬ್ಯಾಂಕ್ ಸಿಬ್ಬಂದಿ, ಇಂಟರ್ ನೆಟ್ ಪ್ರೊವೈಡರ್ಸ್ ಇತ್ಯಾದಿ)

* ಲಸಿಕೆ ಕೊಡುವುದನ್ನು ಆಸ್ಪತ್ರೆಗಳಿಂದ ಹೊರಗೆ ಮಾಡಲು ತೀರ್ಮಾನ (ಶಾಲೆ, ಮೈದಾನ ಇತ್ಯಾದಿ)

* ಲಸಿಕೆ- ಜಾಗತಿಕ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ₹ 843 ಕೋಟಿ ಅನುದಾನದ ಅವಶ್ಯಕತೆ ಇದ್ದು, ಇದಕ್ಕೆ ಕಾರ್ಯಪಡೆ ಒಪ್ಪಿಗೆ.

* ಕೋವಿಡ್ ಮೆಡಿಕಲ್ ತ್ಯಾಜ್ಯ ವಿಲೇವಾರಿ- ಪ್ರತಿ ಹಾಸಿಗೆಗೆ ಗರಿಷ್ ₹ 10 ರೂಪಾಯಿ ನೀಡಲು ತೀರ್ಮಾನ. ಸರ್ಕಾರಿ ಆಸ್ಪತ್ರೆಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಈ ಕ್ರಮ.

* ಗ್ರಾಮೀಣ ಭಾಗ, ನಗರ ಪ್ರದೇಶಗಳ ಕೊಳೆಗೇರಿಗಳಲ್ಲಿ ಹೋಮ್ ಐಸೋಲೇಷನ್ ಇಲ್ಲ. ಗ್ರಾಮೀಣ ಭಾಗದ ಪಿಎಚ್​​ಸಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ.

* ಮನೆ ಮನೆಗೆ ಹೋಗಿ ಆರ್​ಎಟಿ ಟೆಸ್ಟ್ ಮಾಡಬೇಕು. ಪಾಸಿಟಿವ್ ಆದವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್​​ನಲ್ಲಿರಬೇಕು. ಗ್ರಾಮೀಣ ಮಟ್ಟದಲ್ಲಿನ ಹಾಸ್ಟೆಲ್ ಇತ್ಯಾದಿ ಕಡೆ ವ್ಯವಸ್ಥೆ. ಇದರ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ನೀಡಲು ತೀರ್ಮಾನ.

* ಖಾಸಗಿ ವೈದ್ಯರು ಸಲಹೆ‌ ನೀಡಿದ ಸೋಂಕಿತರಿಗೂ ಸರ್ಕಾರಿ ವೈದ್ಯಕೀಯ ಕಿಟ್ ಕೊಡುವುದು. ವೈರಸ್​ನ ಜೆನೆಟಿಕ್ಸ್ ಬದಲಾವಣೆ ಬಗ್ಗೆ ಅಧ್ಯಯನ ನಡೆಸುವ ಲ್ಯಾಬ್‌ ಗಳನ್ನು ರಾಜ್ಯದ ಆರು ಕಡೆ ಸ್ಥಾಪಿಸಲು ತೀರ್ಮಾನ.

* ಮುಂದಿನ 90 ದಿನಗಳಿಗೆ ಅಗತ್ಯ ಇರುವ ಔಷಧ ಮತ್ತು ಪರಿಕರಗಳನ್ನು ಹಂತ ಹಂತವಾಗಿ ₹ 260 ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ. ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಟೆಂಡರ್ ಮೂಲಕ ಖರೀದಿಸಲು ತೀರ್ಮಾನ.

* ಪ್ರತಿ ವಾರ 400 ರೋಗಿಗಳಿಗೆ ಬ್ಲ್ಯಾಕ್​ ಫಂಗಸ್ ತಗಲುವ ನಿರೀಕ್ಷೆಯಿದೆ. ಇದಕ್ಕಾಗಿ ವಾರಕ್ಕೆ 20 ಸಾವಿರ ವೈಯಲ್ಸ್ ಔಷಧಿ ಬೇಡಿಕೆಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

* ಆಮ್ಲಜನಕ ಬಳಕೆಯನ್ನು ನಿಯಂತ್ರಣ ಮಾಡುವ ಡಿಆಡ್‌ಡಿಒ ಅಭಿವೃದ್ಧಿಪಡಿಸಿರುವ 1,000 ಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಲು ನಿರ್ಧಾರ. ಇದಕ್ಕೆ ₹ 6 ಸಾವಿರದಿಂದ ₹ 10 ಸಾವಿರ ವೆಚ್ಚ ತಗುಲುತ್ತದೆ.

* ರೆಮ್‌ಡಿಸಿವಿರ್- 5 ಲಕ್ಷ ಇಂಜೆಕ್ಷನ್ ಖರೀದಿಗೆ‌ ಜಾಗತಿಕ ಟೆಂಡರ್. ಇದಕ್ಕೆ₹ 75 ಕೋಟಿ ಮೀಸಲು. ರಾಜ್ಯದ 207 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 30 ಹಾಸಿಗೆಗಳಿವೆ. ಇದರಲ್ಲಿ 10 ಹಾಸಿಗೆಯನ್ನು ಐಸಿಯು, ತಾಲ್ಲೂಈಕು ಆಸ್ಪತ್ರೆಗಳಲ್ಲಿ 50 ಹಾಸಿಗೆ ಐಸಿಯು ( 15 ವೆಂಟಿಲೇಟರ್‌) ಮೆಡಿಕಲ್ ಕಾಲೇಜು‌ ಇಲ್ಲದ ಜಿಲ್ಲಾ ಕೇಂದ್ರಗಳಲ್ಲಿ ತಲಾ 100 ಐಸಿಯು‌ ಹಾಸಿಗೆ ಮಾಡಲು ತೀರ್ಮಾನ.

* ಬೆಂಗಳೂರು ನಗರ- ಆರೋಗ್ಯ ಕೇಂದ್ರವನ್ನು ಬಿಬಿಎಂಪಿ ವ್ಯಾಪ್ತಿಯಿಂದ ತೆಗೆದು ಅದನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ವಹಿಸಬೇಕು. ತಾಂತ್ರಿಕ ಸಮಸ್ಯೆಗಳಿದ್ದು, ಇದರ ಬಗ್ಗೆ ಅಧ್ಯಯನ ಮಾಡಿ ಮುಂದಿನ ಸಭೆಗೆ ಮಂಡಿಸಲು ತೀರ್ಮಾನ

* ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ‌ 100 ಬೆಡ್​​ಗಳ ಆಸ್ಪತ್ರೆ ನಿರ್ಮಾಣ. ಒಂದು ಲಕ್ಷ ಪಲ್ಸ್‌ ಆಕ್ಸಿ ಮೀಟರ್‌ ಖರೀದಿಗೆ ನಿರ್ಧಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT