ಗುರುವಾರ , ಜೂನ್ 24, 2021
29 °C

ವೇದಾ ಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ ಕೋವಿಡ್‌ನಿಂದ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕ್ರಿಕೆಟ್‌ ಆಟಗಾರ್ತಿ ವೇದಾಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ (67) ಅವರು ಕಡೂರಿನ ಚೇತನ್ ನರ್ಸಿಂಗ್ ಹೋಮ್ ನಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ ಇದೇ 20ರಂದು ಕೋವಿಡ್ ಧೃಢ ಪಟ್ಟಿತ್ತು.

ಮನೆಯಲ್ಲಿ ನಿಗಾ ವ್ಯವಸ್ಥೆಯಲ್ಲಿ ಇದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ. 

ಅವರಿಗೆ ಪತಿ ಎಸ್‌ ಜಿಕೆ ಮೂರ್ತಿ, ವೇದಾ ಸೇರಿ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಬೀರೂರು ಮಾರ್ಗದಲ್ಲಿನ ತೋಟದಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು