ಮಂಗಳವಾರ, ಏಪ್ರಿಲ್ 20, 2021
32 °C

ಹಗಲಿರುಳು ತನಿಖೆ: ದೂರು ಹಿಂಪಡೆಯಲು ಅವಕಾಶವಿಲ್ಲ -ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಿನೇಶ್ ಕಲ್ಲಹಳ್ಲಿ ಅವರ ಪತ್ರಕ್ಕೆ ಉತ್ತರಿಸಿರುವ ಪೊಲೀಸರು, ದೂರು ಹಿಂಪಡೆಯಲು ಠಾಣಾ ಮಟ್ಟದಲ್ಲಿ ಅವಕಾಶವಿಲ್ಲವೆಂದು ಹೇಳಿದ್ದಾರೆ.

'ನಿಮ್ಮ ದೂರು ಆಧರಿಸಿ ಮಾಹಿತಿ‌ ಸಂಗ್ರಹಿಸಲಾಗುತ್ತಿದೆ‌. ಎಫ್ಐಆರ್ ದಾಖಲಿಸುವ ಹಂತಕ್ಕೆ ಬಂದು ನಿಂತಿದ್ದೇವೆ. ಯುವತಿಯನ್ನೂ ಪತ್ತೆ ಮಾಡಲಾಗಿದ್ದು, ಹೇಳಿಕೆ ಪಡೆಯುವುದು ಬಾಕಿ ಇದೆ' ಎಂದೂ ಪೊಲೀಸರು ತಿಳಿಸಿರುವುದಾಗಿ‌ ಗೊತ್ತಾಗಿದೆ.

ಇದನ್ನೂ ಓದಿ...ಸಿ.ಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ದೂರು ಹಿಂಪಡೆಯಲು ಮುಂದಾದ ದಿನೇಶ್

ದಿನೇಶ್ ಕಲ್ಲಹಳ್ಳಿ ಪರವಾಗಿ ಅವರ ವಕೀಲರು ಠಾಣೆಗೆ ಬಂದು ಪತ್ರ ನೀಡಿದ್ದಾರೆ. ಅದನ್ನು ಪೊಲೀಸರು ಸ್ವೀಕರಿಸಿದ್ದು, ಮೌಖಿಕವಾಗಿಯೇ ಉತ್ತರಿಸಿ‌ ಕಳುಹಿಸಿದ್ದಾರೆ. 

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದರು.

ಇದನ್ನೂ ನೋಡಿ.. VIDEO: ಇನ್ನಷ್ಟು ನಾಯಕರ ಅಕ್ರಮಗಳು ಶೀಘ್ರ ಬಹಿರಂಗ: ದಿನೇಶ್ ಕಲ್ಲಹಳ್ಳಿ ಬಾಂಬ್

ಇದನ್ನೂ ಓದಿ.. ಲೈಂಗಿಕ ದುರ್ಬಳಕೆ, ವಂಚನೆ ಆರೋಪ: ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು