ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾ ಪರೀಕ್ಷೆ: ಎರಡೂ ಭಾಷೆಯಲ್ಲಿ ಉತ್ತರಕ್ಕೆ ಅವಕಾಶ

Last Updated 19 ಏಪ್ರಿಲ್ 2022, 19:54 IST
ಅಕ್ಷರ ಗಾತ್ರ

ಬೆಂಗಳೂರು: ಡಿಪ್ಲೊಮಾ ಕೋರ್ಸ್‌ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಶೈಕ್ಷಣಿಕ ಸಾಲಿನಿಂದ ಪರೀಕ್ಷೆ ಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡನ್ನೂ ಬಳಸಿ ಉತ್ತರ ಬರೆ ಯಲು ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಲಿದೆ. ಅಂದರೆ, ವಿದ್ಯಾರ್ಥಿಗಳು ಎರಡೂ ಭಾಷೆಗಳನ್ನು ‘ಮಿಶ್ರಣ’ ಮಾಡಿ ಉತ್ತರ ಬರೆಯಬಹುದು!

‘ಡಿಪ್ಲೊಮಾ ಕೋರ್ಸ್‌ ಸೇರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಎಸ್ಸೆಸ್ಸೆಲ್ಸಿ ಪಾಸಾದವರು. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ವಿಷಯವನ್ನು ಅರ್ಥ ಮಾಡಿಕೊಡಲು ಶಿಕ್ಷಕರುಕನ್ನಡದಲ್ಲಿ ಪಾಠ ಮಾಡು ತ್ತಾರೆ. ಬಹುತೇಕ ಕೋರ್ಸ್‌ಗಳಲ್ಲಿ ತಾಂತ್ರಿಕ ವಿಷಯಗಳಿರುತ್ತವೆ. ಇಲ್ಲಿ ಸಂವಹನಕ್ಕೆ ಮಾತ್ರ ಇಂಗ್ಲಿಷ್ ಬೇಕಾಗಿದೆ. ಹೀಗಾಗಿ, ಪರೀಕ್ಷೆಯಲ್ಲಿ ಎರಡೂ ಭಾಷೆಗಳ ಮಿಶ್ರಣ ಮಾಡಿ ಉತ್ತರ ಬರೆಯಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ’ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್‌ ತಿಳಿಸಿದ್ದಾರೆ.

‘ಡಿಪ್ಲೊಮಾ ಕೋರ್ಸ್‌ಗಳ ಎಲ್ಲ ಸೆಮಿಸ್ಟರ್‌ಗಳ ಪರೀಕ್ಷೆಗಳಲ್ಲಿ ಈ ಬದಲಾವಣೆ ತರಲಾಗುವುದು. ಈಚೆಗೆ ನಡೆದ ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT