ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು: ತಾಲ್ಲೂಕಿಗೆ ₹50 ಲಕ್ಷ

Last Updated 16 ಮಾರ್ಚ್ 2021, 21:44 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ವರ್ಷಗಳಿಂದ ಬರಪೀಡಿತವಾಗಿರುವ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರತಿ ತಾಲ್ಲೂಕಿನ ಕಾರ್ಯಪಡೆಗೆ ₹35 ಲಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಖಾತೆಗೆ ₹15 ಲಕ್ಷ ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ’ಎರಡು ವರ್ಷಗಳಿಂದ ಬರಪೀಡಿತವಾಗಿರುವ ತಾಲ್ಲೂಕಿಗೆ ₹35 ಲಕ್ಷ (ಕಾರ್ಯಪಡೆಗೆ ₹25 ಲಕ್ಷ, ಸಿಇಒ ಖಾತೆಗೆ ₹10 ಲಕ್ಷ), ಒಂದು ವರ್ಷದಿಂದ ಬರಪೀಡಿತವಾಗಿರುವ ತಾಲ್ಲೂಕಿಗೆ ₹25 ಲಕ್ಷ (ಕಾರ್ಯಪಡೆ್ಗೆ ₹15 ಲಕ್ಷ, ಸಿಇಒ ಖಾತೆಗೆ ₹10 ಲಕ್ಷ) ಹಾಗೂ ಬರಪೀಡಿತವಲ್ಲದ ತಾಲ್ಲೂಕಿಗೆ ₹15 ಲಕ್ಷ (ಕಾರ್ಯಪಡೆಗೆ ₹10 ಲಕ್ಷ) ಬಿಡುಗಡೆ ಮಾಡಲಾಗುವುದು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT