ಸೋಮವಾರ, ಜನವರಿ 25, 2021
25 °C
ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಭರವಸೆ

ಗಳಿಕೆ ರಜೆ ನಗದೀಕರಣ ತಡೆ ಆದೇಶ ವಾಪಸ್‌: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಚಿವಾಲಯ ನೌಕರರ ಗಳಿಕೆ ರಜೆ ನಗದೀಕರಣ ತಡೆಹಿಡಿದಿರುವುದನ್ನು ವಾಪಸ್‌ ಪಡೆಯುವುದಾಗಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಭರವಸೆ ನೀಡಿದ್ದಾರೆ’ ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ತಿಳಿಸಿದ್ದಾರೆ.

‘ನೌಕರರ ಇತರ ಹಕ್ಕೊತ್ತಾಯಗಳಾದ ತುಟ್ಟಿ ಭತ್ಯೆ ಸ್ಥಗಿತಗೊಳಿಸಿರುವುದನ್ನು ತೆರವುಗೊಳಿಸಿ ಬಾಕಿ ಉಳಿದ ತುಟ್ಟಿ ಭತ್ಯೆ ಬಿಡುಗಡೆಗೊಳಿಸಬೇಕು, ನಿವೃತ್ತಿ ಹೊಂದಿದ ಅಧಿಕಾರಿ, ನೌಕರರ ಮರು ನೇಮಕಾತಿ ನಿಲ್ಲಿಸಬೇಕು, ಹೊರಗುತ್ತಿಗೆ ನೇಮಕಾತಿ ಸ್ಥಗಿತಗೊಳಿಸಬೇಕು ಹಾಗೂ ನೌಕರ ವಿರೋಧಿ ನಡತೆ ನಿಯಮಾವಳಿಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ’ ಎಂದೂ ಹೇಳಿದ್ದಾರೆ.

ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಚಿವಾಲಯ ನೌಕರರ ಸಂಘ, ವಿಧಾನ ಪರಿಷತ್‌ ಸಚಿವಾಲಯ ನೌಕರರ ಸಂಘ ಮತ್ತು ವಿಧಾನಸಭೆ ಸಚಿವಾಲಯ ನೌಕರರ ಸಂಘದ ವತಿಯಿಂದ ವಿಕಾಸೌಧದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಪ್ರತಿಭಟನೆ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು