ರೈತ ಆತ್ಮಹತ್ಯೆ
ನ್ಯಾಮತಿ: ತಾಲ್ಲೂಕಿನ ಮಾದನಬಾವಿಯಲ್ಲಿ ಶನಿವಾರ ಸಾಲದ ಹೊರೆಯಿಂದ ರೈತ ರುದ್ರೇಶ (40) ಆರುಂಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
‘ರುದ್ರೇಶಪ್ಪ ಅವರ ಹೆಸರಲ್ಲಿ ಮತ್ತು ತಾಯಿ, ಸಹೋದರರ ಹೆಸರಿನಲ್ಲಿ ಜಮೀನು ಇದೆ. ವಿವಿಧ ಬ್ಯಾಂಕ್‌ಗಳಲ್ಲಿ ₹ 1.70 ಲಕ್ಷ ಸಾಲ ಪಡೆದಿದ್ದರು. ಜಮೀನಿನಲ್ಲಿ ಸಮರ್ಪಕ ಇಳುವರಿ ಬಾರದೆ ನಷ್ಟವಾಗಿತ್ತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ರುದ್ರೇಶಪ್ಪ ಅವರ ಮಾವ ಬಾನುವಳ್ಳಿ ಕರಿಯಪ್ಪ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.