ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹4.58 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಕಳವು: ಬಂಧನ

ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದ ಆರೋಪಿ
Last Updated 16 ಫೆಬ್ರುವರಿ 2021, 20:25 IST
ಅಕ್ಷರ ಗಾತ್ರ

ಬೆಂಗಳೂರು: ಕೆಲಸ ಮಾಡುತ್ತಿದ್ದ ಅಂಗಡಿಯಿಂದಲೇ ₹4.58 ಕೋಟಿ ಬೆಲೆ ಬಾಳುವ ಚಿನ್ನದ ಗಟ್ಟಿಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸ್ವಪ್ನಿಲ್ ಘಾಡ್ಗೆ (19) ಬಂಧಿತ ಆರೋಪಿ.

ಬೆಂಗಳೂರಿನ ನಗರ್ತಪೇಟೆಯಲ್ಲಿ ಸಿದ್ದೇಶ್ವರ್ ಹರಿಭಾ ಸಿಂಧೆ ಎಂಬುವರು ಉದ್ಯಮಿಗಳಿಂದ ಹಳೆಯ ಚಿನ್ನದ ಆಭರಣ ಪಡೆದು, ಕರಗಿಸಿ ಚಿನ್ನದ ಗಟ್ಟಿ ತಯಾರಿಸುವ ಅಂಗಡಿಯನ್ನುಹೊಂದಿದ್ದರು. ಅದೇ ಅಂಗಡಿಯಲ್ಲಿ ಆರೋಪಿಸ್ವಪ್ನಿಲ್ ಕೆಲಸ ಮಾಡಿಕೊಂಡಿದ್ದ.

ಜನವರಿ 29ರಂದು ಸುಮಾರು 12 ಕೆ.ಜಿಯಷ್ಟು ಚಿನ್ನ ಕರಗಿಸಿ ಮಾಡಲಾಗಿದ್ದ ಚಿನ್ನದ ಗಟ್ಟಿಗಳನ್ನು ಸಿದ್ದೇಶ್ವರ್ ತನ್ನ ಕೆಲಸಗಾರರ ಜೊತೆ ತೆರಳಿ,ಆರ್‌.ಟಿ.ಸ್ಟ್ರೀಟ್‌ನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಇಟ್ಟು ಬಂದಿದ್ದರು.

ಈ ವಿಷಯ ತಿಳಿದಿದ್ದ ಆರೋಪಿಸ್ವಪ್ನಿಲ್, ಮರುದಿನವೇ ಆ ಮನೆಗೆ ತೆರಳಿದ್ದ. ಮಾಲೀಕರು ಕಳುಹಿಸಿದ್ದಾರೆ ಎಂದು ಸುಳ್ಳು ಹೇಳಿ ಮನೆಯಿಂದಚಿನ್ನದ ಗಟ್ಟಿಗಳನ್ನು ಅಂಗಡಿಗೆ ತಂದು, ಬಳಿಕ ಅಲ್ಲಿಂದ ಕಳವು ಮಾಡಿದ್ದ. ಈ ಸಂಬಂಧ ಅಂಗಡಿ ಮಾಲೀಕ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು.

‘ಕಳವು ಮಾಡಿದ ಬಳಿಕ ಆರೋಪಿ ಮಹಾರಾಷ್ಟ್ರದ ತನ್ನ ಮನೆಯಲ್ಲಿ ಅಡಗಿಕೊಂಡಿದ್ದ. ಆತನನ್ನು ಪತ್ತೆ ಹಚ್ಚಿ, ₹4.58 ಕೋಟಿ ಬೆಲೆ ಬಾಳುವ 11 ಕೆ.ಜಿಯಷ್ಟು ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ. ಉಳಿದ ಒಂದು ಕೆ.ಜಿ ಚಿನ್ನವನ್ನು ಪರಿಚಿತರಿಗೆ ಮಾರಾಟ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆರೋಪಿ ಈ ಹಿಂದೆ ಹೈದರಾಬಾದ್‌ನಲ್ಲಿ ಚಿನ್ನ ಕರಗಿಸುವ ಕೆಲಸ ಮಾಡಿಕೊಂಡಿದ್ದ. ಕಳೆದ ವರ್ಷಕೊರೊನಾದಿಂದ ಊರಿಗೆ ಮರಳಿದ್ದು, ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ. ಬೇಗ ಶ್ರೀಮಂತನಾಗಬೇಕು ಎಂಬ ಆಸೆಯಿಂದ ಚಿನ್ನದ ಗಟ್ಟಿಗಳನ್ನು ಕಳವು ಮಾಡಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.

ಮೂರು ಬೈಕ್ ವಶ: ಆರೋಪಿ ಬಂಧನ
ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ಗೋಪಾಲಪುರ ನಿವಾಸಿ ಜಹೀರ್ ಅಹಮದ್ (35) ಬಂಧಿತ ಆರೋಪಿ.

ಕುರುಬರಹಳ್ಳಿಯ ಅಂಗಡಿಯೊಂದರ ಬಳಿ ನಿಲ್ಲಿಸಿದ್ದ ಬೈಕ್‌ ಅನ್ನು ಆರೋಪಿ ಕದ್ದಿದ್ದ. ಈ ಸಂಬಂಧ ಬೈಕ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.

‘ಆರೋಪಿಯು ಬಸವೇಶ್ವರನಗರ ಠಾಣೆಯ ಸರಹದ್ದಿನಲ್ಲಿ ಮೂರು ದ್ವಿಚಕ್ರ ವಾಹನಗಳನ್ನು ಕದ್ದಿದ್ದ. ಆರೋಪಿಯನ್ನು ಬಂಧಿಸಲಾಗಿದ್ದು, ಮೂರು ಬೈಕ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT