ಜೆಡಿಎಸ್ ಬಿಟ್ಟಿಲ್ಲ: ಶಾಸಕ ಶ್ರೀನಿವಾಸ್
ಹಾಗಲವಾಡಿ: ‘ನಾನು ಜೆಡಿಎಸ್ ಬಿಟ್ಟಿರುವುದಾಗಿ ಎಂದೂ, ಎಲ್ಲೂ ಹೇಳಿಲ್ಲ. ಇನ್ನೊಬ್ಬರನ್ನು ತಂದು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದವರನ್ನೇ ಕೇಳಬೇಕು. ಕಾರ್ಯಕರ್ತರಲ್ಲಿ ಗೊಂದಲಬೇಡ’ ಎಂದು ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಹೇಳಿದ್ದಾರೆ.
‘ಗುಬ್ಬಿ ಕ್ಷೇತ್ರದಲ್ಲಿ ಹಾಲಿ ಶಾಸಕರಿದ್ದರೂ ಇನ್ನೊಬ್ಬರನ್ನು ಅಭ್ಯರ್ಥಿ ಎಂದು ಘೋಷಿಸಿ ಗೊಂದಲ ಸೃಷ್ಟಿಸಿದ ಮುಖಂಡರೇ ನನಗೆ ಕರೆಮಾಡಿ ಮಾತಾಡಲು ಕರೆಯುತ್ತಿದ್ದಾರೆ. ಕುಳಿತು ಮಾತನಾಡಿದರೆ ತಿಳಿಯುತ್ತದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.