ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ರವಿ ದುರಂತ ಕತೆ: ‘ನಗ್ನಸತ್ಯ’ಪುಸ್ತಕದಲ್ಲಿ ರೋಚಕ ಅಂಶಗಳು,ಇಲ್ಲಿದೆ ಮಾಹಿತಿ

Last Updated 2 ಅಕ್ಟೋಬರ್ 2021, 15:33 IST
ಅಕ್ಷರ ಗಾತ್ರ

ಬೆಂಗಳೂರು: ಪತ್ರಕರ್ತ ರಾಮಕೃಷ್ಣ ಉಪಾಧ್ಯ ಬರೆದಿರುವ ಡಿ.ಕೆ. ರವಿ ದುರಂತ ಕತೆ, "ನಗ್ನಸತ್ಯ" ಹಾಗೂ "ಲ್ಯಾಂಡ್, ಲಸ್ಟ್ ಆ್ಯಂಡ್ ಆಡಿಯೊಟೇಪ್ಸ್" ಪುಸ್ತಕಗಳ ಬಿಡುಗಡೆಯಾಗಿದೆ.


"ನಗ್ನಸತ್ಯ"ದಲ್ಲಿರುವ ರೋಚಕ ಅಂಶಗಳು

* ಡಿ.ಕೆ. ರವಿ ಅವರ ಹಠಾತ್ ಜನಪ್ರಿಯತೆ ಮತ್ತು ದುರಂತ ಪತನದ ಹಿಂದೆ ಖಿನ್ನತೆ ಅಡಗಿತ್ತು.

* ಕೊಲಾರ ಡಿಸಿಯಾಗಿ ಮರಳು ಮತ್ತು ಭೂ ಮಾಫಿಯಾ ವಿರುದ್ಧ ಅವರು ಕೈಗೊಂಡ ದಿಟ್ಟ ಕಾರ್ಯಾಚರಣೆಗಳು ಅವರಿಗೆ ಖ್ಯಾತಿ ನೀಡಿದ್ದವು.

* ಮಾಧ್ಯಮದ ನಿಕಟ ಸಂಪರ್ಕವನ್ನು ಅವರು ಬಳಸಿಕೊಂಡಿದ್ದರು.

* ಸ್ನೇಹಿತರ ಜತೆಗೂಡಿ ರಿಯಲ್ ಎಸ್ಟೇಟ್ ಉದ್ಯಮ ಮತ್ತು ವ್ಯವಹಾರಕ್ಕಿಳಿದು, ₹ 500 ಕೋಟಿ ಗಳಿಸುವ ಉದ್ದೇಶ ಹೊಂದಿದ್ದರು.

* ಆದರೆ, ರಿಯಲ್ ಎಸ್ಟೇಟ್ ವ್ಯಾಪಾರ ತಿಮಿಂಗಿಲಗಳಿಂದ ತುಂಬಿದೆ. ಅಲ್ಲಿ ವೇಗವಾಗಿ ಹಣ ಗಳಿಸುವುದು ಯೋಚಿಸಿದಷ್ಟು ಸುಲಭವಲ್ಲ ಎಂದು ಮನವರಿಕೆಯಾದಾಗ ಅವರು ನಿರಾಶೆಗೊಂಡರು.

* ಭೂಮಿಯನ್ನು ಬೆನ್ನಟ್ಟುತ್ತಿರುವಾಗ ನೆರೆಯ ಜಿಲ್ಲೆಯ ಮಹಿಳಾ ಐಎಎಸ್ ಅಧಿಕಾರಿಯೊಂದಿಗೆ ಭಾವನಾತ್ಮಕ ನಂಟಿನಲ್ಲಿ ಸಿಕ್ಕಿಕೊಂಡರು. ಇದು ನೋಡುಗರಿಗೆ ಏಕಮುಖ ಪ್ರೇಮ ಪ್ರಕರಣವೆಂದು ತೋರುತ್ತಿತ್ತು.

* ರವಿಯ ಗೀಳು, ಪ್ರೀತಿ ಮತ್ತು ವಾತ್ಸಲ್ಯಗಳು ಇಬ್ಬರ ದಾಂಪತ್ಯ ಮತ್ತು ವೃತ್ತಿಯನ್ನು ಹಾಳು ಗೆಡವುತ್ತದೆ ಎಂಬುದನ್ನು ಅರಿತುಕೊಂಡ ಮಹಿಳಾ ಅಧಿಕಾರಿ ರವಿ ಅವರನ್ನು ಕೈಬಿಟ್ಟರು.

* ಇದು ಅವರ ಬದುಕು ಬೇಗನೇ ದುರಂತದಲ್ಲಿ ಅಂತ್ಯಗೊಳ್ಳಲು ಬಹುಮಟ್ಟಿಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT