ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಸ್ ಪತ್ನಿ ವಿರುದ್ಧ ಐಎಫ್‌ಎಸ್‌ ಅಧಿಕಾರಿ ಪತಿ ದೂರು: ತಿವಾರಿ ಸಾವಿನ ಪ್ರಸ್ತಾಪ

Last Updated 4 ಸೆಪ್ಟೆಂಬರ್ 2021, 5:21 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿ ವರ್ತಿಕಾ ಕಟಿಯಾರ್‌ ವಿರುದ್ಧ ಅವರ ಪತಿ ಹಾಗೂ ಭಾರತೀಯ ವಿದೇಶಾಂಗ ಸೇವೆಗಳ (ಐಎಫ್‌ಎಸ್‌) ಅಧಿಕಾರಿ ನಿತಿನ್‌ ಸುಭಾಷ್‌ ಯಿಯೋಲಾ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್‌ ಅವರಿಗೆ ದೂರು ನೀಡಿದ್ದಾರೆ.

ವರ್ತಿಕಾ ವಿರುದ್ಧ ಭ್ರಷ್ಟಾಚಾರ ಸೇರಿ ಹಲವು ಆರೋಪಗಳನ್ನು ಮಾಡಿರುವ ನಿತಿನ್‌, ‘2017 ರಲ್ಲಿ ಉತ್ತರಪ್ರದೇಶದ ಲಖನೌದಲ್ಲಿ ನಿಗೂಢವಾಗಿ ಸಾವಿಗೀಡಾದ ಕರ್ನಾಟಕದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರದು ಅಸಹಜ ಸಾವಾಗಿದ್ದು, ಈ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಎರಡು ಬಾರಿ ವರ್ತಿಕಾ ಅವರನ್ನು ಬೆಂಗಳೂರು ಮತ್ತು ದೆಹಲಿಯಲ್ಲಿ ವಿಚಾರಣೆಗೆ ಒಳಪಡಿಸಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ವರ್ತಿಕಾ ಚಾರಿತ್ರ್ಯ ಪ್ರಶ್ನಾರ್ಹವಾಗಿದ್ದು, ಅನುರಾಗ್‌ ತಿವಾರಿ ಜತೆ ಸಂಬಂಧ ಹೊಂದಿದ್ದರು. ತಿವಾರಿ ಮನೆಗೆ ನಿತ್ಯವೂ ಭೇಟಿ ನೀಡುತ್ತಿದ್ದರು. ಇವರಿಬ್ಬರ ಮಧ್ಯೆ ಮೊಬೈಲ್‌ ಮೂಲಕ ನಡೆದಿರುವ ಮಾತುಕತೆ ಮತ್ತು ಸಂದೇಶಗಳ ರವಾನೆಗೆ ಸಂಬಂಧ ಎಲ್ಲ ದಾಖಲೆಗಳೂ ಸಿಬಿಐ ಬಳಿ ಇದೆ. ವರ್ತಿಕಾ ಧಾರವಾಡ ಎಸ್‌ಪಿ ಆಗಿದ್ದಾಗ ಆಯಾಜ್‌ ಖಾನ್‌ ಎಂಬುವರ ಜತೆ ಆಪ್ತವಾಗಿದ್ದಾರೆ. ಇಬ್ಬರೂ ಗೋವಾದ ಕ್ಯಾಸಿನೋಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಹಣಕಾಸಿನ ವ್ಯವಹಾರವೂ ಇದ್ದೂ ವರ್ತಿಕಾ ಪರವಾಗಿ ಆಯಾಜ್‌ ಖಾನ್‌ ಹಣ ವಸೂಲಿ ಮಾಡುತ್ತಿದ್ದರು’ ಎಂದು ದೂರಿದ್ದಾರೆ.

‘ವರ್ತಿಕಾ ಅವರು ಅಘ್ಗಾನಿಸ್ತಾನ, ಶ್ರೀಲಂಕಾ, ಇಟಲಿ, ಸ್ವಿಜರ್‌ಲ್ಯಾಂಡ್‌, ಆಸ್ಟ್ರಿಯಾ ಮುಂತಾದ ದೇಶಗಳಿಗೆ ಅಕ್ರಮವಾಗಿ ಹಣ ಪಡೆದು ಆಗಿಂದ್ದಾಗ್ಗೆ ಪ್ರವಾಸ ಮಾಡಿದ್ದಾರೆ. ಅದಕ್ಕೆ ಆಗಿರುವ ಖರ್ಚು ವೆಚ್ಚ ಮತ್ತು ಅವರ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಜತೆ ತಾಳೆ ಹಾಕಿ ನೋಡಲು ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಕೊಡಗು ಮತ್ತು ಧಾರವಾಡ ಜಿಲ್ಲಾ ಎಸ್ಪಿ ಆಗಿದ್ದಾಗ ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು ಮತ್ತು ವಾಣಿಜ್ಯೋದ್ಯಮಿಗಳಿಂದ ಲಾಭ ಮಾಡಿಕೊಂಡಿದ್ದು, ರೆಸಾರ್ಟ್‌ಗಳ ಮ್ಯಾನೇಜರ್‌ಗಳನ್ನು ಹೆದರಿಸಿ,ಅಲ್ಲಿ ಉಳಿದುಕೊಳ್ಳುತ್ತಿದ್ದರು. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ನಿಖಿಲ್‌ ಆಗ್ರಹಿಸಿದ್ದಾರೆ.

‘ತಮ್ಮ ಸೇವೆಯ ಅವಧಿ ಉದ್ದಕ್ಕೂ ಪೊಲೀಸ್ ಸಿಬ್ಬಂದಿ ಮತ್ತು ಹೋಂಗಾರ್ಡ್‌ಗಳನ್ನು ತಮ್ಮ ಮನೆ ಕೆಲಸಗಳಿಗೆ ಬಳಸಿಕೊಳ್ಳುತ್ತಾ ಬಂದಿದ್ದಾರೆ. ಇವರೆಲ್ಲರನ್ನು ಹೆದರಿಸಿ, ಬೆದರಿಸಿ, ಕಿರುಕುಳ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಆದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT