ಬೆಂಗಳೂರು: ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ. ಅಬ್ದುಲ್ ಸಲೀಂ, ಬೆಂಗಳೂರಿನ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ಆರ್. ರವಿಕಾಂತೇಗೌಡ, ಮೈಸೂರು ನಗರ ಪೊಲೀಸ್ ಕಮಿಷನರ್ ಚಂದ್ರಗುಪ್ತ ಸೇರಿದಂತೆ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸೋಮವಾರ ಆದೇಶ ಹೊರಡಿಸಲಾಗಿದೆ.
ವರ್ಗಾವಣೆ ವಿವರ: ಎಂ.ಅಬ್ದುಲ್ ಸಲೀಂ– ವಿಶೇಷ ಕಮಿಷನರ್, ಸಂಚಾರ ವಿಭಾಗ, ಬೆಂಗಳೂರು ನಗರ; ಉಮೇಶ್ ಕುಮಾರ್– ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆಡಳಿತ ವಿಭಾಗ, ದೇವಜ್ಯೋತಿ ರೇ– ಐಜಿಪಿ, ಕುಂದುಕೊರತೆ ಮತ್ತು ಮಾನವ ಹಕ್ಕುಗಳ ವಿಭಾಗ; ರಮಣ ಗುಪ್ತ– ಜಂಟಿ ಪೊಲೀಸ್ ಕಮಿಷನರ್, ಗುಪ್ತಚರ ವಿಭಾಗ, ಬೆಂಗಳೂರು ನಗರ; ಬಿ.ಆರ್. ರವಿಕಾಂತೇಗೌಡ– ಡಿಐಜಿ, ಸಿಐಡಿ.
ಬಿ.ಎಸ್. ಲೋಕೇಶ್ ಕುಮಾರ್– ಡಿಐಜಿ, ಬಳ್ಳಾರಿ ವಲಯ, ಚಂದ್ರಗುಪ್ತ– ಡಿಐಜಿ, ಪಶ್ಚಿಮ ವಲಯ, ಮಂಗಳೂರು, ಶರಣಪ್ಪ ಎಸ್.ಡಿ.– ಜಂಟಿ ಕಮಿಷನರ್, ಅಪರಾಧ ವಿಭಾಗ, ಬೆಂಗಳೂರು ನಗರ, ಎಂ.ಎನ್. ಅನುಚೇತ್– ಜಂಟಿ ಕಮಿಷನರ್, ಸಂಚಾರ ವಿಭಾಗ, ಬೆಂಗಳೂರು ನಗರ, ರವಿ ಡಿ. ಚನ್ನಣ್ಣನವರ್– ವ್ಯವಸ್ಥಾಪಕ ನಿರ್ದೇಶಕ, ಕಿಯೋನಿಕ್ಸ್. ಬಿ. ರಮೇಶ್– ಪೊಲೀಸ್ ಕಮಿಷನರ್, ಮೈಸೂರು ನಗರ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.