ಮಂಗಳವಾರ, ಆಗಸ್ಟ್ 16, 2022
27 °C

‘ಶ್ರೀಲಂಕಾಕ್ಕೆ ಹೋಗುವುದು ತಪ್ಪಾ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಶ್ರೀಲಂಕಾಕ್ಕೆ ಹೋಗುವುದು ತಪ್ಪಾ?’ ಎಂದು ಶಾಸಕ ಯು.ಟಿ. ಖಾದರ್‌ ಪ್ರಶ್ನಿಸಿದರು.

‘ಶಾಸಕ ಜಮೀರ್‌ ಅಹಮದ್ ಖಾನ್ ಶ್ರೀಲಂಕಾಕ್ಕೆ ಹೋಗಿದ್ದಾರೆ’ ಎಂಬ ಆರೋಪಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಡ್ರಗ್ಸ್‌ಗೆ ಪಕ್ಷ ಇದೆಯಾ? ಈ ಜಾಲದಲ್ಲಿ ಯಾರೇ ತಪ್ಪಿತಸ್ಥರು ಇದ್ದರೂ ಶಿಕ್ಷೆಗೆ ಒಳಪಡಿಸಿ. ಆದರೆ, ಸರ್ಕಾರ ‘ಹಿಟ್‌ ಆ್ಯಂಡ್‌ ರನ್‌’ ಮಾಡಬಾರದು. ಅಲ್ಲದೇ, ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಸಾಕ್ಷ್ಯಾಧಾರಗಳಿಲ್ಲದ ಹೇಳಿಕೆಗಳನ್ನು ನೀಡಬಾರದು’ ಎಂದರು.

‘ಶ್ರೀಲಂಕಾಕ್ಕೆ ಹೋಗಲು ಸರ್ಕಾರವೇ ವಿಮಾನದ ವ್ಯವಸ್ಥೆ ಮಾಡಿದೆ. ಅಲ್ಲಿನ ಕಾನೂನು ಬಗ್ಗೆ ಆ ದೇಶವೇ ನಿರ್ಧರಿಸುತ್ತದೆ. ರಾಜ್ಯ ಸರ್ಕಾರವು ಮೊದಲು ರಾಜ್ಯದಲ್ಲಿ ಡ್ರಗ್ಸ್‌ ದಂಧೆ ಮಟ್ಟ ಹಾಕಲು ಕ್ರಮ ಕೈಗೊಳ್ಳಲಿ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.