ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದಲ್ಲಿ ನಡೆದ ‘ಮರು ಬಳಕೆ ಉಡಾವಣಾ ವಾಹನ’ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ

Last Updated 2 ಏಪ್ರಿಲ್ 2023, 5:21 IST
ಅಕ್ಷರ ಗಾತ್ರ

ಬೆಂಗಳೂರು: ರಾಕೆಟ್‌ ಉಡಾವಣೆಯ ‘ಪುನರ್‌ ಬಳಕೆಯ ಉಡಾವಣಾ ವಾಹನ’(ಆರ್‌ಎಲ್‌ವಿ–ಎಲ್‌ಇಎಕ್ಸ್)ದ ಲ್ಯಾಂಡಿಂಗ್‌ ಪರೀಕ್ಷೆ ಭಾನುವಾರ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ತಿಳಿಸಿದೆ.

ಈ ಪರೀಕ್ಷೆಯನ್ನು ಚಿತ್ರದುರ್ಗದಲ್ಲಿರುವ ರಕ್ಷಣಾ ಇಲಾಖೆಯ ಏರೋನಾಟಿಕಲ್ ಪರೀಕ್ಷಾ ವಲಯದಲ್ಲಿ ಸ್ಥಾಪಿಸಿದ್ದ ಪ್ರಥಮ ರನ್‌ವೇನಲ್ಲಿ ನಡೆಸಲಾಯಿತು.

ವಾಯುಪಡೆ ಮತ್ತು ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಭಾನುವಾರ ಮುಂಜಾನೆ ಈ ಪ್ರಯೋಗವನ್ನು ನಡೆಸಲಾಯಿತು ಎಂದು ಇಸ್ರೊ ಹೇಳಿದೆ.

ಪರೀಕ್ಷೆಯ ವೇಳೆಯಲ್ಲಿ ಪುನರ್‌ ಬಳಕೆಯ ಉಡಾವಣಾ ವಾಹನದ ಕವಚವನ್ನು ಹೆಲಿಕಾಪ್ಟರ್‌ ಮೂಲಕ 3 ರಿಂದ 5 ಕಿ.ಮೀ ಎತ್ತರದಿಂದ ಸಮತಲ ವೇಗದಲ್ಲಿ ರನ್‌ವೇಗೆ ಇಳಿ ಬಿಡಲಾಗುವುದು. ಹೀಗೆ ಇಳಿ ಬಿಟ್ಟ ಬಳಿಕ ಕವಚವು ರನ್‌ವೇಯಲ್ಲಿ ಜಾರಿಕೊಂಡು ಚಲಿಸಲಿದೆ ಎಂದು ಇಸ್ರೊ ಅಧಿಕಾರಿಗಳು ನವೆಂಬರ್‌ನಲ್ಲಿ ಪರೀಕ್ಷೆಯ ಸಿದ್ಧತೆ ವೇಳೆ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT