ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಉದ್ಯಮ: ಬೊಕ್ಕಸಕ್ಕೆ ₹ 5,137 ಕೋಟಿ ನಷ್ಟ

Last Updated 22 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಬೆಂಗಳೂರು: 2020–21ನೇ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳಿಂದ
₹5,137.65 ಕೋಟಿಯಷ್ಟು ನಷ್ಟವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಅಂದಾಜು ಮಾಡಿದೆ.

ಈ ಅವಧಿಯಲ್ಲಿ ರಾಜ್ಯದ ಸಾರ್ವಜನಿಕ ಉದ್ದಿಮೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಿಎಜಿ ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಮಂಡಿಸಲಾಯಿತು. 124 ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಸಂಬಂಧಿಸಿದ ವಿವರಗಳನ್ನು ಈ ವರದಿ ಒಳಗೊಂಡಿದೆ.

ಈ ಅವಧಿಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ₹ 77,607.61 ಕೋಟಿ ಮೊತ್ತದ ವಹಿವಾಟು ನಡೆಸಿವೆ. 111 ಸಾರ್ವಜನಿಕ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿದ್ದರೆ, 47 ಉದ್ದಿಮೆಗಳು ಸ್ಥಗಿತಗೊಂಡಿವೆ. ಈ ಅವಧಿಯಲ್ಲಿ 47 ಸಾರ್ವಜನಿಕ ಉದ್ದಿಮೆಗಳು ₹ 2,986.47 ಕೋಟಿ ಲಾಭ ಗಳಿಸಿದ್ದು, 42 ಉದ್ದಿಮೆಗಳು ₹ 8,124.12 ಕೋಟಿ ನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು ₹ 572.64 ಕೋಟಿ ವೆಚ್ಚದ ವಿದ್ಯುತ್‌ ವಿತರಣಾ ‘ಆಟೊಮೇಷನ್‌ ಸಿಸ್ಟಂ’ ಯೋಜನೆಯನ್ನು ಎಂಟು ವರ್ಷಗಳಷ್ಟು ವಿಳಂಬವಾಗಿ ಅನುಷ್ಠಾನಕ್ಕೆ ತಂದಿದೆ. ಈ ಕಾರಣದಿಂದಾಗಿ ತಂತ್ರಾಂಶ ಮತ್ತು ಯಂತ್ರೋಪಕರಣಗಳು ಸೇವಾ ಅವಧಿಯ ಮುಕ್ತಾಯದ ಹಂತ ತಲುಪಿದ್ದವು ಎಂದು ಸಿಎಜಿ ಹೇಳಿದೆ.

ರಾಜ್ಯದ ಸಾರಿಗೆ ನಿಗಮಗಳು ಈ ಅವಧಿಯಲ್ಲಿ ಒಟ್ಟು ₹ 4,689.09 ಕೋಟಿ ನಷ್ಟವಾಗಿದೆ. ಕರ್ನಾಟಕ ರಾಜ್ಯ ವಿದ್ಯುನ್ಮಾನ ನಿಗಮವು (ಕಿಯೋನಿಕ್ಸ್‌) ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸದ ಉತ್ಪನ್ನಗಳನ್ನು ಖರೀದಿಸಿ
ಪೂರೈಸಿರುವುದರಿಂದ ₹ 11.13 ಕೋಟಿ ನಷ್ಟ ಅನುಭವಿಸಿದೆ ಎಂಬ ಅಂಶ ವರದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT