ಭಾನುವಾರ, ಏಪ್ರಿಲ್ 2, 2023
33 °C
ರಾಜ್ಯ ಸರ್ಕಾರಕ್ಕೆ ಕೋರಿಕೆ

ಪರೀಕ್ಷಾ ಅಕ್ರಮ ತಡೆಗೆ ಚುನಾವಣಾ ಆಯೋಗಕ್ಕಿರುವಂತಹ ಅಧಿಕಾರ ನೀಡಿ: ಕೆಇಎ ಮನವಿ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ವೇಳೆ ಕಠಿಣ ಕ್ರಮಗಳನ್ನು ಕೈಗೊಂಡ ಬಳಿಕವೂ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳಿಗೆ ಅಂತ್ಯ ಹಾಡಲು ಚುನಾವಣಾ ಆಯೋಗಕ್ಕಿರುವ ಅಧಿಕಾರ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ.

ಸಹಾಯಕ ಪ್ರಾಧ್ಯಾಪಕರ ಮತ್ತು ಕೆಪಿಟಿಸಿಎಲ್‌ನ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಕೆಇಎ ಇತ್ತೀಚೆಗೆ ನಡೆಸಿದ್ದ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಪರೀಕ್ಷಾ ಅಕ್ರಮ ನಡೆಯಬಾರದೆಂದು ಅಭ್ಯರ್ಥಿಗಳಿಗೆ ‘ವಸ್ತ್ರಸಂಹಿತೆ’, ಹಾಲ್‌ಟಿಕೆಟ್‌ಗೆ ಪತ್ರಾಂಕಿತ ಅಧಿಕಾರಿ ಸಹಿ ಹಾಕಿಸಿ ಕೊಂಡು ಪರೀಕ್ಷೆ ನಡೆಸಿದರೂ ಅಕ್ರಮ ತಡೆಯಲು ಸಾಧ್ಯವಾಗಿಲ್ಲ. ಹೀಗಾಗಿ, ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಿದೆ ಎಂದು ಕೆಇಎ ಪ್ರತಿಪಾದಿಸಿದೆ.

ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿ ರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ, ‘ಚುನಾವಣಾ ಆಯೋಗ ತನ್ನ ಕರ್ತವ್ಯಕ್ಕೆ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸುವ ಅಧಿಕಾರವನ್ನು ಎಲ್ಲ ಪರೀಕ್ಷಾ ಪ್ರಾಧಿ ಕಾರಗಳಿಗೆ ನೀಡಬೇಕು. ಅಕ್ರಮ ಎಸ ಗುವ ಅಭ್ಯರ್ಥಿ, ಸಿಬ್ಬಂದಿಗೆ ಕಠಿಣ ಶಿಕ್ಷೆ ವಿಧಿಸಲು ವಿಶೇಷ ಕಾನೂನು ರೂಪಿಸ ಬೇಕು’ ಎಂದು ಸಲಹೆ ನೀಡಿದ್ದಾರೆ.

‘ಪ್ರತಿ ಪರೀಕ್ಷೆಗೆ ರಾಜ್ಯದಾದ್ಯಂತ ಕಾರ್ಯನಿರ್ವಹಿಸುವ ಗ್ರೂಪ್‌ ‘ಎ’ ಮತ್ತು ‘ಬಿ’ ಅಧಿಕಾರಿಗಳನ್ನು ವೀಕ್ಷಕರ ನ್ನಾಗಿ ನಿಯೋಜಿಸಲು ಅಧಿಕಾರ ನೀಡಬೇಕು. ಹೀಗೆ ನಿಯೋಜಿಸುವ ಅಧಿಕಾರಿ, ಸಿಬ್ಬಂದಿಯನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮತ್ತು ಸ್ವಂತ ಜಿಲ್ಲೆ ಹೊರತುಪಡಿಸಿ ಇತರ ಜಿಲ್ಲೆಗಳಿಗೆ ನಿಯೋಜಿಸುವ ಅಧಿಕಾರ ನೀಡಬೇಕು. ನಿಯೋಜಿಸಿದ ಕರ್ತವ್ಯಕ್ಕೆ ಗೈರಾದರೆ, ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಗೈರು ಹಾಜರಾದರೆ ವಿಧಿಸುವ ರೀತಿಯ ದಂಡ ಹಾಕಲು ಅಧಿಕಾರ ನೀಡಬೇಕು’ ಎಂದು ಅವರು ಕೋರಿದ್ದಾರೆ.

‘ಒಂದು ತಾಲ್ಲೂಕಿನಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಪರೀಕ್ಷೆ ಆರಂಭವಾಗುವ ಮೂರು ಗಂಟೆ ಮೊದಲು ಲಾಟರಿ ಮುಖಾಂತರ ಕೇಂದ್ರಗಳಿಗೆ ಹಂಚಿಕೆ ಮಾಡುವ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ನೇಮಕಾತಿಗೆ ಸಂಬಂ ಧಿಸಿದ ಎಲ್ಲ ಪರೀಕ್ಷೆಗಳನ್ನು ಎರಡು ಹಂತಗಳಲ್ಲಿ ಮಾಡಬೇಕು. ಮೊದಲ ಹಂತದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಕೆಲವೇ ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ಬರೆಯುವ ವ್ಯವಸ್ಥೆ ರೂಪಿಸಬೇಕು. ರಾಜ್ಯದಲ್ಲಿ ಅನೇಕ ನಿಗಮ, ಮಂಡಳಿಗಳಿದ್ದು, ಅವುಗಳಿಗೆ ಏಕರೂಪದ ನೇಮಕಾತಿ ವ್ಯವಸ್ಥೆ ತರ ಬೇಕು. ಆಡಳಿತ ಸಹಾಯಕ ಹುದ್ದೆಗಳಿಗೆ ವರ್ಷದಲ್ಲಿ ಒಂದು ಬಾರಿ ಮಾತ್ರ ಪರೀಕ್ಷೆ ನಡೆಸಿ ಅರ್ಹತಾ ಪಟ್ಟಿಯ ಅನುಸಾರ ಆ ವರ್ಷದಲ್ಲಿ ನಡೆಯುವ ಎಲ್ಲ ಇಲಾಖೆಗಳು, ನಿಗಮ–ಮಂಡಳಿಗಳಿಗೆ ಅಭ್ಯರ್ಥಿ ಗಳನ್ನು ಪರಿಗಣಿಸಬೇಕು’ ಎಂದು ಪತ್ರ ದಲ್ಲಿ ತಿಳಿಸಿದ್ದಾರೆ.

***

ಲಕ್ಷಾಂತರ ಅಭ್ಯರ್ಥಿಗಳು ಬರೆಯುವ ಪರೀಕ್ಷೆಗೆ ಸಾವಿರಾರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಸುಧಾರಣಾ ಕ್ರಮ ಜಾರಿ ಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

-ಎಸ್‌. ರಮ್ಯಾ,ಕಾರ್ಯನಿರ್ವಾಹಕ ನಿರ್ದೇಶಕಿ, ಕೆಇಎ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು