ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ವೇತನಕ್ಕೆ ಒತ್ತಾಯ: ಸಾರಿಗೆ ನಿವೃತ್ತ ನೌಕರರ ಧರಣಿ

Last Updated 11 ನವೆಂಬರ್ 2020, 21:29 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಸಮ್ಮತವಾದ ನಿವೃತ್ತಿ ವೇತನ ನೀಡುವಂತೆ ಒತ್ತಾಯಿಸಿ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿಯ ನಿವೃತ್ತ ನೌಕರರು ಮೌರ್ಯ ವೃತ್ತದಲ್ಲಿ ಧರಣಿ ನಡೆಸಿದರು.

‘ನ್ಯಾಯಾಲಯವು ನ್ಯಾಯಸಮ್ಮತ ನಿವೃತ್ತಿ ವೇತನ ನೀಡುವಂತೆ ನಿರ್ದೇಶನ ನೀಡಿ ನಾಲ್ಕು ವರ್ಷ ಕಳೆದಿದ್ದರೂ ಭವಿಷ್ಯ ನಿಧಿ ಪ್ರಾಧಿಕಾರವು ನಿವೃತ್ತಿ ವೇತನ ಹೆಚ್ಚಿಸದ ಕಾರಣ ನಾವು ಧರಣಿ ನಡೆಸಬೇಕಾಯಿತು’ ಎಂದು ಬಿಎಂಟಿಸಿ-ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದರು.

‘ಕೇಂದ್ರ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ತೀರ್ಪಿಗೆ ಅಡ್ಡಿಪಡಿಸುತ್ತಿದೆ. ತೀರ್ಪು ಪ್ರಕಟವಾಗದೆ, ನಿವೃತ್ತರಿಗೆ ಸೂಕ್ತ ನಿವೃತ್ತಿ ವೇತನ ಕೈಸೇರಲು ಸಾಧ್ಯವಾಗುತ್ತಿಲ್ಲ.ಈಗಾಗಲೇ ನೂರಾರು ಮಂದಿ ನಿವೃತ್ತ ನೌಕರರು ಮರಣ ಹೊಂದಿದ್ದಾರೆ. ಈಗಿನ ನಿವೃತ್ತಿ ವೇತನ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT