ಸೋಮವಾರ, ಜನವರಿ 25, 2021
20 °C

ಕೆಎಸ್‌ಆರ್‌ಟಿಸಿ ಬಸ್ ಒಪ್ಪಂದ ದರ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮದುವೆ, ಪ್ರವಾಸ ಹಾಗೂ ಇನ್ನಿತರ ಕಾರಣಗಳಿಗೆ ಐಷಾರಾಮಿ ಬಸ್‌ಗಳನ್ನು ಒಪ್ಪಂದದ ಆಧಾರದಲ್ಲಿ ನೀಡಲು ಮುಂದಾಗಿರುವ ಕೆಎಸ್‌ಆರ್‌ಟಿಸಿ, ದರಗಳನ್ನು ಇಳಿಕೆ ಮಾಡಿದೆ.

47ರಿಂದ 49 ಆಸನಗಳ ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸೆಲ್) ಬಸ್‌ ಒಪ್ಪಂದದ ದರ ಪ್ರತಿ ಕಿಲೋ ಮೀಟರ್‌ಗೆ ₹5ರಿಂದ ₹10 ಉಳಿಕೆ ಮಾಡಲಾಗಿದೆ. 32 ಆಸನಗಳ ಎಸಿ ಸ್ಲೀಪರ್ ಬಸ್ಸಿನ ಒಪ್ಪಂದ ದರ ಪ್ರತಿ ಕಿಲೋ ಮೀಟರ್‌ಗೆ ₹5ರಿಂದ ₹6ರವರೆಗೆ ಇಳಿಕೆ ಮಾಡಲಾಗಿದೆ.

40 ಆಸನಗಳ ಫ್ಲೈ ಬಸ್ಸಿನ ಒಪ್ಪಂದ ದರ ಪ್ರತಿ ಕಿ.ಮೀಗೆ ₹10ರಿಂದ ₹16 ರವರೆಗೆ ಕಡಿಮೆ ಮಾಡಲಾಗಿದೆ. ಪ್ರತಿದಿನ 400ರಿಂದ 500 ಕಿಲೋ ಮೀಟರ್ ಪ್ರಯಾಣಿಸಬೇಕು ಎಂಬುದನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಸ್‌ಗಳನ್ನೇ ಬಳಕೆ ಮಾಡಿಕೊಳ್ಳಲು ಉತ್ತೇಜಿಸುವ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು