ಶನಿವಾರ, ಮಾರ್ಚ್ 25, 2023
28 °C

ಕೂಡ್ಲಿ–ಶೃಂಗೇರಿ ಮಠಕ್ಕೆ ಪೀಠಾಧಿಪತಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯಲ್ಲಿರುವ ಕೂಡ್ಲಿ-ಶೃಂಗೇರಿ ಮಠಕ್ಕೆ ಪಂಡಿತ ಜನಾರ್ದನ ಶಾಸ್ತ್ರಿ ಜೋಶಿ ಅವರನ್ನು ನೂತನ ಪೀಠಾಧಿಪತಿಯನ್ನಾಗಿ ನೇಮಕ ಮಾಡಲಾಗಿದೆ.

ಮಠದ ಪ್ರಾಂಗಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಭಕ್ತಾದಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಠದ ಎಲ್ಲ ವ್ಯವಹಾರ ನಿರ್ವಹಣೆ ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಮಠದ ಹಿಂದಿನ ಪೀಠಾಧಿಪತಿ ವಿದ್ಯಾಭಿನವ ಶಂಕರಭಾರತಿ ಸ್ವಾಮೀಜಿ ಅವರು ಈ ವರ್ಷದ ಮೇ ತಿಂಗಳಲ್ಲಿ ಬ್ರಹ್ಮೈಕ್ಯರಾಗಿದ್ದರು. 

ಪೀಠಾಧಿಪತಿ ನೇಮಕಕ್ಕೆ ಸಂಬಂಧಿಸಿದಂತೆ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ರವಿ ದೇಶಪಾಂಡೆ ಪ್ರಸ್ತಾವನೆ ಮಂಡಿಸಿದರು. ಈ ಸಂದರ್ಭದಲ್ಲಿ ಹಿಂದಿನ ಶ್ರೀಗಳು ಒಂದು ವರ್ಷದ ಹಿಂದೆಯೇ ಮುಂದಿನ ಪೀಠಾಧಿಪತಿ ನೇಮಕಕ್ಕೆ ಕುರಿತು ಸಿದ್ಧಪಡಿಸಿದ್ದ ಅಧಿಕೃತ ಪತ್ರ ಹಾಗೂ ನಿಯೋಜಿತ ಪೀಠಾಧಿಪತಿ ಅವರ ತಂದೆ–ತಾಯಿಗೆ ಖುದ್ದಾಗಿ ಬರೆದ ಪತ್ರವನ್ನು ಸಭೆಯ ಮುಂದಿಟ್ಟರು.  ಜನಾರ್ದನ ಶಾಸ್ತ್ರಿ ಜೋಶಿ ಅವರನ್ನು ಸರ್ವಾನುಮತದಿಂದ ನೂತನ ಪೀಠಾಧಿಪತಿಯನ್ನಾಗಿ ನೇಮಕ ಮಾಡಲಾಯಿತು. ಜೋಶಿ ಅವರು ವೇದ, ಉಪನಿಷತ್ತು ಹಾಗೂ ಸಂಸ್ಕೃತ ಭಾಷಾ ಬೆಳವಣಿಗೆಗೆ ಅಪಾರ ಸೇವೆ ಸಲ್ಲಿಸಿರುವ ಪಂಡಿತ ಪ್ರಕಾಂಡ ಬಾಲಚಂದ್ರ ಶಾಸ್ತ್ರಿ ಅವರ ಪುತ್ರ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು