ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ | ಮಾಸ್ಕ್‌ ಬಳಕೆ: ಗೊಂದಲ ಬೇಡ

Last Updated 24 ನವೆಂಬರ್ 2020, 21:28 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ‘ಮಾಸ್ಕ್’ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ಮಾಸ್ಕ್‌ನ ಮಹತ್ವ ಹಾಗೂ ಅದರ ಬಳಕೆ ಕುರಿತು ಇನ್ನೂ ಜನರಲ್ಲಿ ಗೊಂದಲಗಳಿವೆ. ‘ಎನ್‌ 95’ ಮಾಸ್ಕ್ ಯಾರು ಧರಿಸಬೇಕು, ಮಾಸ್ಕ್ ನಿರ್ವಹಣೆ ಹೇಗೆ ಎಂಬ ಬಗ್ಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ.ಎಸ್.ರಾಜೇಶ್‌ಕುಮಾರ್ ಕೆಲವು ಸಲಹೆಗಳನ್ನು ನೀಡಿದ್ದಾರೆ.‌

ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಕೈ ತೊಳೆಯುವಂತಹ ಮೂರು ಪ್ರಮುಖ ಕ್ರಮಗಳ ಮೂಲಕ ಕೊರೊನಾ ಸೋಂಕು ಹರಡುವುದನ್ನು ಯಶಸ್ವಿಯಾಗಿ ತಡೆಗಟ್ಟಬಹುದು. ಇದರಲ್ಲಿ ಮಾಸ್ಕ್ ಧರಿಸುವುದರಿಂದ ವ್ಯಕ್ತಿಯಿಂದ ವ್ಯಕ್ತಿಗೆ ಕೊರೊನಾ ಸೋಂಕು ಹರಡುವುದು ತಪ್ಪುತ್ತದೆ.

ಹಲವು ತೆರನಾದ ಮಾಸ್ಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ಗಳು, ಎನ್‌ 95 ಮಾಸ್ಕ್‌ಗಳು ಹಾಗೂ ಸರ್ಜಿಕಲ್ ಮಾಸ್ಕ್‌ಗಳು ಇವುಗಳಲ್ಲಿ ಪ್ರಮುಖವಾದವು. ಎಲ್ಲ ತೆರನಾದ ಸಂದರ್ಭಗಳಿಗೆ ಬಟ್ಟೆಯ ಮಾಸ್ಕ್‌ ಬಳಕೆಗೆ ಬರುವುದಿಲ್ಲ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಎನ್‌ 95 ಹಾಗೂ ಸರ್ಜಿಕಲ್ ಮಾಸ್ಕ್‌ ಅನ್ನು ಬಳಸಲೇಬೇಕಾಗುತ್ತದೆ.

ತುಂಬಾ ಜನಸಂದಣಿ ಇರುವ ಕಡೆ, ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ ಎನ್ನಿಸಿದಾಗ ಬಟ್ಟೆಯ ಮಾಸ್ಕ್ ಧರಿಸಿದರೆ ಸಾಕು.

60 ವರ್ಷ ದಾಟಿದವರು, ತೀವ್ರತರವಾದ ಕಾಯಿಲೆಯಿಂದ ಬಳಲುತ್ತಿರುವವರು, ಮನೆಯಲ್ಲಿ ಬೇರೊಬ್ಬ ರೋಗಿಯ ಆರೈಕೆಯಲ್ಲಿರುವವರು ಹಾಗೂ ಆರೋಗ್ಯ ಕಾರ್ಯಕರ್ತರು ಮೂರು ಪದರ ಇರುವ ಸರ್ಜಿಕಲ್ ಮಾಸ್ಕ್‌ ಬಳಸಬೇಕು.

ಕೋವಿಡ್ ರೋಗಿಗಳು ಹಾಗೂ ಶಂಕಿತ ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿರುವವರು, ಮನೆಯಲ್ಲಿ ಕೋವಿಡ್ ರೋಗಿಯ ಜತೆ ಇರುವವರು ಹಾಗೂ ಕೊರೊನಾ ಕರ್ತವ್ಯದಲ್ಲಿರುವ ಎಲ್ಲ ಕಾರ್ಯಕರ್ತರೂ ‘ಎನ್ 95’ ಮಾಸ್ಕ್‌ ಬಳಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT