ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಹಾನಿ ಭೀತಿ: ಕೋರ್ಟ್‌ ಮೊರೆಗೆ ಮುರುಘಾ ಶರಣರು

Last Updated 22 ಜೂನ್ 2022, 18:49 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠಕ್ಕೆ ಸಂಬಂಧಿಸಿದ ವರದಿಗಳು ಅಥವಾ ಲೇಖನಗಳನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ರಾಜ್ಯದ ಪ್ರಮುಖ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳ ವಿರುದ್ಧ ಮುರುಘಾ ಶರಣರು ತಡೆ ಆದೇಶ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಕುರಿತಂತೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ 64ರಲ್ಲಿ ಅಸಲು ದಾವೆ (ಒ.ಎಸ್‌. 2644/2022) ದಾಖಲಿಸಲಾಗಿದ್ದು ಒಟ್ಟು 43 ಮಾಧ್ಯಮ ಸಂಸ್ಥೆ ಗಳನ್ನು ಪ್ರತಿವಾದಿಗಳನ್ನು ಹೆಸರಿಸ ಲಾಗಿದೆ.

‘ಕೆಲವು ಪ್ರತಿಸ್ಪರ್ಧಿಗಳು ಮಠದ ಹೆಸರಿಗೆ ಮತ್ತು ನನಗೆ ಕಳಂಕ ತರಲು ಪ್ರಯತ್ನಿಸುತ್ತಿರುವ ಕಾರಣ ಮಠ ಮತ್ತು ನನಗೆ ಸಂಬಂಧಿಸಿದ ಯಾವುದೇ ವರದಿ ಅಥವಾ ಚರ್ಚೆಗಳನ್ನು ಪ್ರಕಟಿಸದಂತೆ ತಡೆ ನೀಡಬೇಕು’ ಎಂದು ಶರಣರು ದಾವೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT