ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ 2022: ನಾಡಹಬ್ಬದ ಸಂಭ್ರಮಕ್ಕೆ ನಾಡು ಸಜ್ಜು

ಮೈಸೂರು, ಮಡಿಕೇರಿ, ಮಂಗಳೂರಿನಲ್ಲಿ ಹೆಚ್ಚಿದ ಸಂತಸ
Last Updated 3 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಮೈಸೂರು/ಮಂಗಳೂರು: ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯು ಸೇರಿದಂತೆ, ನಾಡಹಬ್ಬ ದಸರಾವನ್ನು ಸಂಭ್ರಮದಿಂದ ಆಚರಿಸಲು ನಾಡು ಸಜ್ಜಾಗಿದೆ. ಕೋವಿಡ್‌ನಿಂದಾಗಿ ಎರಡು ವರ್ಷ ಕಳೆಗುಂದಿದ್ದ ಆಚರಣೆಗೆ ಈ ಬಾರಿ ಅದ್ಧೂರಿತನ ಮೇಳೈಸಿದೆ.

ಸಾಂಸ್ಕೃತಿಕ ನಗರ ಮೈಸೂರು ಅಲ್ಲದೆ, ಕೊಡಗು ಜಿಲ್ಲೆಯ ಮಡಿಕೇರಿ, ಕರಾವಳಿಯ ಮಂಗಳೂರು ಹಾಗೂ ಧಾರ್ಮಿಕ ಯಾತ್ರಾಸ್ಥಳ ಶೃಂಗೇರಿಯಲ್ಲೂ ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊ
ಳ್ಳಲು ಜನರು ಸಜ್ಜಾಗಿದ್ದಾರೆ. ನಗರಗಳು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿವೆ.

ಬುಧವಾರ ನಡೆಯುವ ದಸರಾ ಶೋಭಾಯಾತ್ರೆಗೆ ಮಂಗಳೂರು ನಗರ, ದಶಮಂಟಪಗಳ ಶೋಭಾಯಾತ್ರೆಗೆ ಮಡಿಕೇರಿ, ವಿಜಯದಶಮಿ ಆಚರಣೆಗೆ ಶೃಂಗೇರಿ ಸಜ್ಜಾಗಿವೆ. ವಿವಿಧ ಜಾನಪದ ಕಲಾತಂಡಗಳು ಉತ್ಸವದ ಮೆರುಗು ಹೆಚ್ಚಿಸಲಿವೆ.

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ದಸರಾ ಉತ್ಸವದ ಪ್ರಮುಖ ಆಕರ್ಷಣೆ
ಯಾದ ಜಂಬೂಸವಾರಿ ಮೆರವಣಿಗೆಯು ಅ.5ರಂದು ನಡೆಯಲಿದೆ.750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ, ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ನಮಿಸಲು, ಮೆರವಣಿಗೆ ವೈಭವ ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ. ಈ ಬಾರಿ ದೀಪಾಲಂಕಾರದ ನಡುವೆ ಮೆರವಣಿಗೆ ಸಾಗುವುದು ವಿಶೇಷ.

ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.36ರಿಂದ 2.50ರೊಳಗೆ ನಂದಿಧ್ವಜ ಪೂಜೆ ನಡೆಯಲಿದೆ. ಸಂಜೆ 5.07ರಿಂದ 5.18ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಬೂಸವಾರಿ ಉದ್ಘಾಟಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT