ಗುರುವಾರ , ಆಗಸ್ಟ್ 18, 2022
26 °C

ಸಿದ್ದರಾಮಯ್ಯ ಕದ್ದು ತಿನ್ನುವ ಭ್ರಷ್ಟಾಚಾರಿ: ನಳಿನ್‌ ಕುಮಾರ್‌ ಕಟೀಲ್‌ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಅಧಿಕಾರಕ್ಕಾಗಿ ರಾಷ್ಟ್ರವನ್ನು ವಿಭಜನೆ ಮಾಡಿದ ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ, ರಾಜ್ಯ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕುಟುಕಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಬಹುತೇಕ ನಾಯಕರು ಜಾಮೀನಿನ ಮೇಲೆ  ಹೊರಗೆ ಇದ್ದಾರೆ. ಕೋಟಿ ಬೆಲೆಯ ವಾಚ್ ತೆಗೆದುಕೊಂಡ ಸಿದ್ದರಾಮಯ್ಯ ಯಾರಿಗೂ ಗೊತ್ತಿಲ್ಲದೆ ಕದ್ದು ತಿನ್ನುವ ದೊಡ್ಡ ಭ್ರಷ್ಟಾಚಾರಿ’ ಎಂದು ದೂರಿದರು.

‘ಪದವಿ ಸಿಗುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದರು. ಲಿಂಗಾಯತರನ್ನು ವಿಭಜನೆ ಮಾಡಲು ಮುಂದಾಗಿದ್ದರು. ನಮ್ಮ ಆಡಳಿತದಲ್ಲಿ ವಿಭಜನೆಗಳಿಲ್ಲ’ ಎಂದು ತಿರುಗೇಟು ನೀಡಿದರು.

‘ಪಠ್ಯಪುಸ್ತಕದ ವಿಚಾರದಲ್ಲಿ ಯಾವ ಜಾತಿ, ಮತ, ಪಂಥ ಮುಖ್ಯವಲ್ಲ. ರಾಮಾಯಣ ವಾಲ್ಮೀಕಿ ಬರೆದಿದ್ದು, ಆದರ್ಶಗಳಷ್ಟೇ ಮುಖ್ಯ. ಭಗವದ್ಗೀತೆ ಬ್ರಾಹ್ಮಣ, ವೈಶ್ಯ, ಶೂದ್ರರ ಮನೆಯಲ್ಲೂ ಇವೆ. ಮೌಲ್ಯಧಾರಿತ ಶಿಕ್ಷಣ ಮುಖ್ಯ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು